ಮಂಗಳೂರು: ಮಹಾಕಾಳಿಪಡ್ಡು ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಬಾಲಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕು ಬನ್ನಿಹಟ್ಟಿ ಗ್ರಾಮದವರಾಗಿದ್ದು, ಮಹಾಕಾಳಿಪಡ್ಡುವಿನ ನಿರ್ಮಲ ನಗರದಲ್ಲಿ ವಾಸವಾಗಿರುವ ಕಣ್ಣನ ಗೌಡ ಎಂಬುವರ ಪುತ್ರ ವರುಣ್ (15) ಮೃತಪಟ್ಟವರು.
ಮಹಾಕಾಳಿಪಡ್ಡು ಅಂಡರ್ ಪಾಸ್ ಬಳಿಯ ಭಜನಾ ಮಂದಿರದ ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಚೆಂಡು ಮಂದಿರದ ಛಾವಣಿಗೆ ಬಿದ್ದಿದೆ. ಅದನ್ನು ತೆಗೆಯಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಶಾಕ್ ಏರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವರುಣ್ ವಾರದ ಹಿಂದೆಯಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ತಂದೆ ಕಣ್ಣನ ಗೌಡ ಮಹಾಕಾಳಿಪಡ್ಡುವಿನಲ್ಲಿ ಕ್ಯಾಂಟೀನ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ವರುಣ್ ಮೂವರು ಮಕ್ಕಳಲ್ಲಿ ಮಧ್ಯದವನಾಗಿದ್ದು, ತಂದೆ-ತಾಯಿ, ಅಣ್ಣ ಮತ್ತು ಮೂರುವರೆ ವರ್ಷದ ತಂಗಿಯನ್ನು ಅಗಲಿದ್ದಾರೆ.





