ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಮೂಡ್ಕೇರಿ ಪ್ರದೇಶದಲ್ಲಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಸಂಬಂಧಿಸಿದಂತೆ ಗಂಭೀರ ಅಪರಾಧ ಪ್ರಕರಣ ದಾಖಲಾಗಿದೆ.
ದಿನಾಂಕ 12/04/2026 ರಂದು ಬೆಳಿಗ್ಗೆ ಸುಮಾರು 11:00 ಗಂಟೆಯ ವೇಳೆ, ಬಿ.ಟಿ. ಮಂಜು ಬಡಬಾಳು (ಸಿದ್ದಾಪುರ), ಕೇಶವ, ರಾಜು, ಕೃಷ್ಣ ಸೇರಿದಂತೆ ಸುಮಾರು 15 ಜನರ ಗುಂಪು ಗರಡಿಗೆ ಅನಧಿಕೃತವಾಗಿ ಪ್ರವೇಶಿಸಿದರೆಂದು ಆರೋಪಿಸಲಾಗಿದೆ. ಆರೋಪಿಗಳು ಗರಡಿಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಪಿರ್ಯಾದಿದಾರರಾದ ಅಶೋಕ ಪೂಜಾರಿ (48), ಬಸ್ರೂರು ಗ್ರಾಮ, ಕುಂದಾಪುರ ಅವರು ಇದನ್ನು ಪ್ರಶ್ನಿಸಿದಾಗ, ಆರೋಪಿಗಳು ಅವರಿಗೆ ಅವಾಚ್ಯವಾಗಿ ಬೈದು ನಿಂದಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಗರಡಿಯ ಒಳಭಾಗದಲ್ಲಿ ನಗದು ಹಾಗೂ ಚಿನ್ನ ಇರುವುದಾಗಿ ತಿಳಿದುಬಂದಿದ್ದು, ಬೀಗ ಒಡೆದ ಪರಿಣಾಮ ಸುಮಾರು ₹500/- ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026 ಅಡಿಯಲ್ಲಿ ಕಲಂ 329(4), 352, 324(4) ಹಾಗೂ 3(5) BNS ಪ್ರಕಾರ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.






