ಅಮಾಸೆಬೈಲು: ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಕುತ್ತಿಗೆಗೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಚಂದ್ರಶೇಖರ ಎಂದು ತಿಳಿದು ಬಂದಿದೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರ ಸಚಿನ್ ಚಂದ್ರ (29) ಸಿದ್ದಾಪುರ ಅಂಚೆ ಹೊಸಂಗಡಿ ಗ್ರಾಮ ಇವರ ತಂದೆ ಚಂದ್ರಶೇಖರ (60) ರವರು ಕೃಷಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಇತ್ತೀಚೆಗೆ ಭಯವಾಗುತ್ತಿದೆ. ಮಾನಸಿನಲ್ಲಿ ಏನೇನೋ ಅಲೋಚನೆ ಅಗುತ್ತಿದ್ದು ಇದರಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ಮನನೊಂದು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಹೆಗ್ಗೋಡ್ಲು ಕಂಬಳಗದ್ದೆ ಮನೆ ಸಮೀಪ ಇರುವ ಹಾಡಿಯಲ್ಲಿರುವ ಕಾಟು ಮರಕ್ಕೆ ದಿನಾಂಕ: 03-08-2025 ರಂದು 18:00 ಗಂಟೆಯಿಂದ 19:00 ಗಂಟೆಯ ಮದ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುತ್ತಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2025 ಕಲಂ: 194 ಬಿ ಎನ್.ಎಸ್. ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.