Home Latest ಸುಳ್ಳು ನೋಂದಣಿ ಫಲಕವನ್ನ ಪ್ರದರ್ಶಿಸಿ ಸಂಚಾರಿಸುತ್ತಿದ್ದ ಬಸ್ ಮುಟ್ಟುಗೋಲು…!!

ಸುಳ್ಳು ನೋಂದಣಿ ಫಲಕವನ್ನ ಪ್ರದರ್ಶಿಸಿ ಸಂಚಾರಿಸುತ್ತಿದ್ದ ಬಸ್ ಮುಟ್ಟುಗೋಲು…!!

ಉಡುಪಿ : ಸುಳ್ಳು ನೋಂದಣಿ ಫಲಕವನ್ನ ಪ್ರದರ್ಶಿಸಿ ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಸೂರಜ್ ಮಾಲಕತ್ವದ ಕೆ ಉಮೇಶ್ ಚಲಾಯಿಸುತ್ತಿದ್ದ ರಾಜೇಂದ್ರ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬಿಕಾ ಬಸ್ ನ್ನು (KA20AB4242) ಆರ್ ಟಿ ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರ್ ಟಿ ಒ ಅಧಿಕಾರಿಗಳು ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ವಾಹನದ ಅಡಿಗಟ್ಟು ಸಂಖ್ಯೆ MAT751120KFJ13668 ಆಗಿದ್ದು, ಯಂತ್ರದ ಸಂಖ್ಯೆ ಯು 497TC41JPY829428 ಆಗಿರುವುದು ಕಂಡುಬoದಿರುತ್ತದೆ. ಈ ಸಂಖ್ಯೆ KA20AA8756 ವಾಹನದ್ದಾಗಿರುತ್ತದೆ. ವಾಹನಕ್ಕೆ ಸುಳ್ಳು ನೋಂದಣಿ ಫಲಕವನ್ನ ಪ್ರದರ್ಶಿಸಿ ಸಂಚರಿಸುತ್ತಿರುವುದು ಕಂಡು ಬಂದಿರುತ್ತದೆ ವಾಹನದ ಚಾಲಕನನ್ನ ತಪಾಸಣೆಗಾಗಿ ಒಳಪಡಿಸಿದಾಗ ವಾಹನ ಯಾವುದೇ ದಾಖಲಾತಿಗಳನ್ನು ಹಾಗೂ ಚಾಲನಾ ಪರವಾನಿಗೆಯನ್ನು ಹಾಜರುಪಡಿಸಲು ವಿಫಲರಾಗಿರುತ್ತಾರೆ. ಆದುದರಿಂದ KA20AB4242 ಅಂಬಿಕಾ ಬಸ್ ನ್ನು ಆರ್ ಟಿ ಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರ್ ಟಿ ಒ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.