Home Latest ಮಣಿಪಾಲ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮಣಿಪಾಲ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮಣಿಪಾಲ ಸಮೀಪದ ಶಿವಳ್ಳಿ ಗ್ರಾಮದ ಕರಂಬಳ್ಳಿ ದೇವಸ್ಥಾನದ ಬಳಿ ದಾರುಣ ಘಟನೆ ನಡೆದಿದೆ. ರಾಘವೇಂದ್ರ (45) ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಸಹೋದರಿ ಲಕ್ಷ್ಮೀ (37), ಬ್ರಹ್ಮಾವರ, ಉಡುಪಿ ಇವರ ನೀಡಿದ ದೂರಿನ ಪ್ರಕಾರ, ರಾಘವೇಂದ್ರ ಅವರು ಒಬ್ಬರೇ ವಾಸವಾಗಿದ್ದು, ಮದ್ಯಪಾನದ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಜೀವನದಲ್ಲಿ ಯಾವುದೋ ಕಾರಣದಿಂದ ಬೇಸರಗೊಂಡು, ದಿನಾಂಕ 03/04/2026 ಮಧ್ಯಾಹ್ನ 2:00 ಗಂಟೆಯಿಂದ 06/04/2026 ಮಧ್ಯಾಹ್ನ 2:45 ಗಂಟೆಯ ಅವಧಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.