Home Crime ಸಾಸ್ತಾನ ಟೋಲ್‌ನಲ್ಲಿ ನಿವೃತ್ತ ಕಮಾಂಡೋಗೆ ಅವಮಾನ : ಮಾಜಿ ಸೈನಿಕರಿಂದ ಪೊಲೀಸರಿಗೆ ದೂರು…!!

ಸಾಸ್ತಾನ ಟೋಲ್‌ನಲ್ಲಿ ನಿವೃತ್ತ ಕಮಾಂಡೋಗೆ ಅವಮಾನ : ಮಾಜಿ ಸೈನಿಕರಿಂದ ಪೊಲೀಸರಿಗೆ ದೂರು…!!

ಕೋಟ : ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್‌ನಲ್ಲಿ ‘ಆಪರೇಷನ್ ಪರಾಕ್ರಮ್’ ವೀರ ಯೋಧ, ನಿವೃತ್ತ ಪ್ಯಾರಾ ಕಮಾಂಡೋ ಶ್ಯಾಮರಾಜ್ ಅವರಿಗೆ ಟೋಲ್ ಸಿಬ್ಬಂದಿ ಅವಮಾನ ಮಾಡಿದ ಘಟನೆ ನಡೆದಿದೆ. ವೀಲ್ ಚೇರ್ ಅವಲಂಬಿತರಾಗಿರುವ ಈ ಸೈನಿಕರು ತಮ್ಮ ಪತ್ನಿಯ (ಮಿಲಿಟರಿ ನರ್ಸಿಂಗ್ ಅಧಿಕಾರಿ) ವರ್ಗಾವಣೆಯ ಸಂಬಂಧ ಪ್ರಯಾಣಿಸುತ್ತಿದ್ದಾಗ, ಟೋಲ್ ವಿನಾಯಿತಿ ದಾಖಲೆಗಳನ್ನು ತೋರಿಸಿದರೂ ಸಿಬ್ಬಂದಿ ಹಣಕ್ಕಾಗಿ ಪಟ್ಟು ಹಿಡಿದು ಉದ್ಧಟತನ ತೋರಿದ್ದಾರೆ.

ಈ ಘಟನೆಯ ಬಗ್ಗೆ ಸೈನಿಕರು ಸ್ಥಳದಲ್ಲೇ ವೀಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಾಜಿ ಸೈನಿಕರ ಸಂಘದ ಪ್ರತಿಭಟನೆ ಮತ್ತು ಪೊಲೀಸರ ಮಧ್ಯಸ್ಥಿಕೆಯ ನಂತರ ಟೋಲ್ ಸಿಬ್ಬಂದಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿ ಅಂಗವಿಕಲರಾದ ಸೈನಿಕರಿಗೆ ಆದ ಈ ಅವಮಾನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.