Home Crime ಉಡುಪಿ : ಸರಕಾರಿ ಬಾಲ ಮಂದಿರದಲ್ಲಿ ಇಬ್ಬರು ಮಕ್ಕಳು ನಾಪತ್ತೆ…!!

ಉಡುಪಿ : ಸರಕಾರಿ ಬಾಲ ಮಂದಿರದಲ್ಲಿ ಇಬ್ಬರು ಮಕ್ಕಳು ನಾಪತ್ತೆ…!!

ಉಡುಪಿ: ನಗರದ ಸರಕಾರಿ ಬಾಲ ಮಂದಿರದ ಸಂಸ್ಥೆಯಲ್ಲಿ ಇಬ್ಬರು ಮಕ್ಕಳು ಓಡಿ ಹೋದ ಘಟನೆ ಸಂಭವಿಸಿದೆ.

ನಾಪತ್ತೆಯಾದ ಮಕ್ಕಳು ಬೆಂಗಳೂರು ನಿವಾಸಿಗಳಾದ ದಿಲೀಪ್ ಹಾಗೂ ಧನರಾಜ್ ಎಂದು ತಿಳಿದು ಬಂದಿದೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ದಿಲೀಪ್ (14), ಜ್ಞಾನಮಂದಿರ ಸರಕಾರಿ ಶಾಲೆ ಕನಕ ನಗರ ಇಳೆಜ್ ನಗರ ಹತ್ತಿರ ಅಂಗನವಾಡಿ ಹತ್ತಿರ ವಿಷ್ಣುವರ್ಧನ ಸರ್ಕಲ್, 13 ನೆ ಕ್ರಾಸ್ ಬೆಂಗಳೂರು ಮತ್ತು ಧನರಾಜ್ (13), ವಾಸ: ರಾಜೇಶ್ವರಿ ನಗರ ರ್ಡನ್, ಅಂಜನೆಯ ದೇವಸ್ಥಾನ ರಾಜೆಶ್ವರಿ ನಗರ ಪಾರ್ಕ, ಕುಮಾರಿ ಸ್ವಾಮಿ ಲೇಔಟ್ ಬೆಂಗಳೂರು ಎಂಬ ಇಬ್ಬರು ಬಾಲಕರು ದಿನಾಂಕ 07/07/2025 ರಿಂದ ಸರಕಾರಿ ಬಾಲಕರ ಬಾಲ ಮಂದಿರ ಉಡುಪಿ ಸಂಸ್ಥೆಗೆ ಸ್ವಾಗತ ಕೇಂದ್ರದ ಮೂಲಕ ದಾಖಾಲಾಗಿದ್ದು, ದಿನಾಂಕ 13/07/2025 ರಂದು ಬಾಲಕರು ಮದ್ಯಾಹ್ನ 01:40 ರ ಹೊತ್ತಿಗೆ ಸಂಸ್ಥೆಯ ಕಾರಿಡರ್ ನ ಬಾಗಿಲಿನಿಂದ ಓಡಿ ಹೋಗಿರುವುದಾಗಿ ಪ್ರಮೋದ್ , ಗೃಹಪಾಲಕರು ಸರಕಾರಿ ಬಾಲಕರ ಬಾಲ ಮಂದಿರ,ಸಗ್ರಿ, ಚಕ್ರತೀರ್ಥ, ಶಿವಳ್ಳಿ ಕುಂಜಿಬೆಟ್ಟು, ಉಡುಪಿ ಇವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2025 ಕಲಂ: 137 (2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.