ಕಾಪು ವಿಧಾನಸಭಾ ಕ್ಷೇತ್ರದ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 35 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ನೆರವೇರಿಸಿದರು.
ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಂಪಳ್ಳಿ 1ನೇ ವಾರ್ಡಿನ ತೆಂಕು ಮನೆ ರಸ್ತೆ ಅಭಿವೃದ್ಧಿ 10 ಲಕ್ಷ, ಬೆಳ್ಳಂಪಳ್ಳಿ 2ನೇ ವಾರ್ಡಿನ ಗುಲಾಬಿ ಕಾಂಚನ್ ಮನೆಯಿಂದ ವಾದಿರಾಜ ಕಾಂಚಾನ್ ಮನೆ ವರೆಗೆ ರಸ್ತೆ ಅಭಿವೃದ್ಧಿ – 10 ಲಕ್ಷ, ಬೆಳ್ಳಂಪಳ್ಳಿ ಮಹಾಲಕ್ಷ್ಮಿ ಭಜನಾ ಮಂದಿರದ ಹಿಂದುಗಡೆ ರಸ್ತೆ ಅಭಿವೃದ್ಧಿ – 10 ಲಕ್ಷ, ಪುಂಚೂರು ಲಕ್ಷೀ ಬಾಯಿ ಮನೆ ಹತ್ತಿರ ಬ್ರಿಡ್ಜ್ ರಸ್ತೆ ಅಭಿವೃದ್ಧಿ – 5 ಲಕ್ಷ ಸೇರಿದಂತೆ ಒಟ್ಟು 35 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪುರಂದರ ಕೋಟ್ಯಾನ್, ಮಾಜಿ ಸದಸ್ಯರಾದ ಶಂಕರ್ ಸಾಲ್ಯಾನ್, ಜಯಾನಂದ ನಾಯಕ್, ಉಷಾ, ಸೌಮ್ಯ, ಪ್ರೇಮಾ, ಸುನಿತಾ ನಾಯಕ್, ಹರೀಶ್ ನಾಯ್ಕ್, ಪೆರ್ಡೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಜೀಯಾನಂದ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಸಾಲ್ಯಾನ್, ಸ್ಥಳೀಯರಾದ ಹರಿಜೀವನ್ ಹೆಗ್ಡೆ, ಕೃಷ್ಣ ನಾಯ್ಕ್, ಅರವಿಂದ್ ಆಚಾರ್ಯ, ದಿಲೇಶ್ ಶೆಟ್ಟಿ, ಗಿರೀಶ್, ಜಗದೀಶ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.





