Home Crime ಡ್ರಗ್ಸ್ ಸೇವಿಸಿದ ಆರು ಮಂದಿ ಅರೆಸ್ಟ್…!!

ಡ್ರಗ್ಸ್ ಸೇವಿಸಿದ ಆರು ಮಂದಿ ಅರೆಸ್ಟ್…!!

ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಸೇವಿಸಿದ ಆರೋಪದಡಿ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಕಿರಣ ಪ್ರಸಾದ್(22), ಮಹಮ್ಮದ್ ಸಲ್ಮಾನ್(18), ಪ್ರಜ್ವಲ್(23), ಕಾರ್ತಿಕ್ (24) ಪ್ರಜ್ವಲ್ ಅಶ್ವತ್ಥ ವೇಗಸ್(25), ಅನ್ಸಿಲ್ ಗ್ರಿಪ್ಥ್ ಅಲ್ಪ್ರೇಡ್(24) ಬಂಧಿತರು.

ಅಡ್ಯಾ‌ರ್ ಪದವು ಪ್ರದೇಶದ ಅಂಬೇಡ್ಕರ್ ಭವನ ಎದುರಿನ ಮೈದಾನದಲ್ಲಿ ಗಾಂಜಾ ಸೇವನೆ ಮಾಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕಿರಣ ಪ್ರಸಾದ್, ಮಹಮ್ಮದ್ ಸಲ್ಮಾನ್ ಎಂಬುವರನ್ನು ಗಸ್ತಿನಲ್ಲಿದ್ದ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಅಡ್ಯಾರ್‌ಕಟ್ಟೆ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾರ್ತಿಕ್, ಪ್ರಜ್ವಲ್ ಎಂಬುವರನ್ನು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.

ಮತ್ತೊಂದು ಪ್ರಕರಣದಲ್ಲಿ ಪಡುಶೆಡ್ಡೆ ರೈಲ್ವೆ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಸೇವನೆ ಮಾಡಿದ್ದ ಪ್ರಜ್ವಲ್ ಅಶ್ವತ್ಥ ವೇಗಸ್ ಎಂಬಾತನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೊಂದೇಲ್ ಜಂಕ್ಷನ್ ಬಳಿ ಗಾಂಜಾ ಸೇವನೆ ಮಾಡಿದ ಅನ್ಸಿಲ್ ಗ್ರಿಫ್ಥ್ ಅಲ್ಪ್ರೇಡ್‌ ಎಂಬಾತನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.