ಕೋಟ, ಮಾ.16: ಮನೆದಿಂದ ಹೊರಟು ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐರೋಡಿ ಗ್ರಾಮ ಬ್ರಹ್ಮಾವರ ನಿವಾಸಿ ಮೊಂತಿ ಲೋಬೋ (42) ಅವರು ತಮ್ಮ ತಮ್ಮನಾದ ಪ್ರಾನ್ಸಿಸ್ ಲೋಬೋ (38) ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ.
ದೂರುದಾರರ ಪ್ರಕಾರ, ದಿನಾಂಕ 14/03/2026 ರಂದು ರಾತ್ರಿ ಸುಮಾರು 9:00 ಗಂಟೆಗೆ ಊಟ ಮಾಡಿದ ಬಳಿಕ ಪ್ರಾನ್ಸಿಸ್ ಲೋಬೋ ಅವರು ಮನೆಯ ಹೊರಗಡೆ ಮಲಗಿದ್ದರು. ಬಳಿಕ ರಾತ್ರಿ ಮನೆಯ ಒಳಗಡೆ ಮುಂದೆ ಹಿಂದೆ ತಿರುಗಾಡುತ್ತಿದ್ದುದನ್ನು ಗಮನಿಸಲಾಗಿದೆ. ಆದರೆ 15/03/2026 ರಂದು ರಾತ್ರಿ ಸುಮಾರು 1:00 ಗಂಟೆಗೆ ನೋಡಿದಾಗ ಅವರು ಮನೆಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ಸಂಬಂಧಿಕರ ಮನೆಗಳು ಹಾಗೂ ಉಡುಪಿ ಮತ್ತು ಮಲ್ಪೆ ಭಾಗಗಳಲ್ಲಿ ಹುಡುಕಾಟ ನಡೆಸಿದರೂ ಪ್ರಾನ್ಸಿಸ್ ಲೋಬೋ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



