Home Crime ಕಾರ್ಕಳ : ಹಿಂಸಾತ್ಮಕ ಜಾನುವಾರು ಸಾಗಾಟ ಪತ್ತೆ – ಎರಡು ದನಗಳ ರಕ್ಷಣೆ, ಪ್ರಕರಣ...

ಕಾರ್ಕಳ : ಹಿಂಸಾತ್ಮಕ ಜಾನುವಾರು ಸಾಗಾಟ ಪತ್ತೆ – ಎರಡು ದನಗಳ ರಕ್ಷಣೆ, ಪ್ರಕರಣ ದಾಖಲು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸರು ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ERSS-112 ಕರ್ತವ್ಯದಲ್ಲಿದ್ದ ಪೊಲೀಸರು ನೀರೆ ಬೈಲೂರು ಪ್ರದೇಶದಲ್ಲಿ ರೌಂಡ್ಸ್ ನಡೆಸಿ ಕಾರ್ಕಳ ಕಡೆಗೆ ವಾಪಸ್ಸಾಗುತ್ತಿದ್ದ ವೇಳೆ ಕುಕ್ಕಂದೂರು ಗ್ರಾಮದ ಹಾರ್ಜೆಡ್ಡು ಶ್ರೀ ದೇವಿ ಕೃಪಾ ಹಾಲ್ ಎದುರು ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಟಾಟಾ ಇಂಟ್ರಾ ಗೂಡ್ಸ್ ವಾಹನವನ್ನು ಪರಿಶೀಲಿಸಿದರು.

ಪರಿಶೀಲನೆಯ ವೇಳೆ ವಾಹನದೊಳಗೆ ಎರಡು ದನಗಳನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿರುವುದು ಕಂಡುಬಂದಿದೆ. ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಲೋಕೇಶ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.