Home Crime ತೀರ್ಥಹಳ್ಳಿ : ಮಂಗನ ಕಾಯಿಲೆಗೆ 2ನೇ ತರಗತಿಯ ಬಾಲಕ ಬಲಿ…!!

ತೀರ್ಥಹಳ್ಳಿ : ಮಂಗನ ಕಾಯಿಲೆಗೆ 2ನೇ ತರಗತಿಯ ಬಾಲಕ ಬಲಿ…!!

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ದತ್ತರಾಜಪುರ ಗ್ರಾಮದಲ್ಲಿ ಮಂಗನ‌ ಕಾಯಿಲೆಗೆ (ಕೆಎಫ್‌ಡಿ ) ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಮೃತ ಬಾಲಕನನ್ನು ರಚಿತ್(7) ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ರಚಿತ್ ಗೆ 4 ದಿನಗಳ ಕಾಲ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ 12 ದಿನಗಳ ಕಾಲ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 9 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತು. ರಚಿತ್ ಕೋಣಂದೂರಿನ ನವಜ್ಯೋತಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.