ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ಶಾಶ್ವತ ಸೇವಾ ಯೋಜನೆಯಡಿ ಯಲ್ಲಿ ನೀಲಾವರ ಗೋಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಸದಸ್ಯರಿಂದ ಸಂಗ್ರಹಿಸಿದ ರೂ 4 ಲಕ್ಷ ದೇಣಿಗೆಯನ್ನು ಸಭಾದ ಅಧ್ಯಕ್ಷ ಕೃಷ್ಣರಾಜ್ ಬಲ್ಲಾಳ್ ರವರು ಪೇಜಾವರ ಮಠದ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ‘ಗೋವುಗಳನ್ನು ಗೋ ಭಕ್ತರ ಸಹಕಾರದಿಂದ ಪೋಷಿಸುವ ದೊಡ್ಡ ಕನಸು ಹಿರಿಯ ಯತಿಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರದಾಗಿತ್ತು. ಎಲ್ಲರ ಸಹಕಾರದಿಂದ ಈ ಕನಸು ನನಸಾಗುತ್ತಿದೆ’ ಎಂದರು.
ಈ ಸಂದರ್ಭದಲ್ಲಿ ಕೊಡವೂರು ಗೋಶಾಲೆಗೆ ಒಂದು ದಿನದ ಗೋಗ್ರಾಸ ಸೇವೆಯನ್ನು ವಲಯದ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಭಾದ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ್ ಮುಳ್ಳೇರಿಯ ಕಾರ್ಯದರ್ಶಿ ಸುರೇಶ ಉಪಾಧ್ಯ ಪದಾಧಿಕಾರಿಗಳಾದ ಶ್ರೀವತ್ಸ ಆಚಾರ್ಯ, ಅನಂತಕೃಷ್ಣ ಕೊಡ್ಲಾಯ, ಡಾ ಪ್ರಕಾಶ ರಾವ್, ಸತ್ಯನಾರಾಯಣ ಕೆ ಎನ್, ವಾದಿರಾಜ್ ಬಾಯರಿ, ಗುರುರಾಜ್ ಆಚಾರ್ಯ, ಗೋಪಾಲಕೃಷ್ಣ, ರಮೇಶ ರಾವ್, ಗುರುರಾಜ್ ಕೆದಿಲಾಯ, ರಾಘವೇಂದ್ರ ಕಲ್ಕೂರ, ವೆಂಕಟೇಶ್ ಆರ್, ಹರಿಕೃಷ್ಣ ಆಚಾರ್ಯ, ಸಭಾದ ಮಹಿಳಾ ಸದಸ್ಯರು, ಗೋವರ್ಧನ ಗಿರಿ ಟ್ರಸ್ಟ್ ನ ನಾಗರಾಜ್ ರಾವ್, ಶಶಿಧರ ಭಟ್, ಹರೀಶ ಮುಂತಾದವರು ಉಪಸ್ಥಿತರಿದ್ದರು.



