Home Crime ಬೆಳ್ತಂಗಡಿ: ಕೋಳಿ ಅಂಕಕ್ಕೆ ಖಾಕಿ ದಾಳಿ : 7 ಮಂದಿ ಸೆರೆ…!

ಬೆಳ್ತಂಗಡಿ: ಕೋಳಿ ಅಂಕಕ್ಕೆ ಖಾಕಿ ದಾಳಿ : 7 ಮಂದಿ ಸೆರೆ…!

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಪುರುಷರಗುಡ್ಡೆ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಸಂಜೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ನಾವೂರು ನಿವಾಸಿ ಹರಿಶ್ಚಂದ್ರ ತೋಟತ್ತಾಡಿ ನಿವಾಸಿ ರಮೇಶ್, ಚಾರ್ಮಾಡಿ ನಿವಾಸಿ ಸುಧಾಕರ, ಚಾರ್ಮಾಡಿ ನಿವಾಸಿ ಅಶೋಕ್, ಬೆಳ್ತಂಗಡಿಯ ಪುಷ್ಪರಾಜ್, ನಾವೂರು ನಿವಾಸಿ ಶ್ರೀಧರ್, ಚಿಬಿದ್ರೆ ನಿವಾಸಿ ಚೆನ್ನಪ್ಪ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಆರು ಕೋಳಿ, ಮೂರು ಸಾವಿರ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.