ಕಾಪು: ಉಡುಪಿ ಜಿಲ್ಲೆಯ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾರತದ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ 109ನೇ ಜನ್ಮದಿನಾಚರಣೆಯನ್ನು, ಕಾಪು ರಾಜೀವ್ ಭವನ ದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾಂತಲತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಿವಂಗತ ಇಂದಿರಾ ಗಾಂಧಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ ಯವರು ಮಾತನಾಡಿ, ಇಂದಿರಾ ಗಾಂಧಿಯವರ ರಾಜಕೀಯ ಜೀವನ, ಅವರು ಕೈಗೊಂಡಿದ್ದ ಕ್ರಾಂತಿಕಾರಿ ನಿರ್ಣಯಗಳು, ದಿಟ್ಟ ನಾಯಕತ್ವ ಹಾಗೂ ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳಾದ ಉಳುವವನೇ ಹೊಲದೊಡೆಯ, ವಸತಿ ಭಾಗ್ಯ, ಬ್ಯಾಂಕುಗಳ ರಾಷ್ಟ್ರೀಕರಣ, ಬಡತನ ನಿರ್ಮೂಲನೆ ಕಾರ್ಯಕ್ರಮಗಳ ಮೂಲಕ ದೇಶದ ಆರ್ಥಿಕತೆಗೆ ಬಲ ತುಂಬಿದರು. ಅವರ ಕ್ರಾಂತಿಕಾರಿ ಹೆಜ್ಜೆಗಳಲ್ಲೊಂದಾದ ಬಾಂಗ್ಲಾ ವಿಮೋಚನೆಯಂತಹ ಅಂತಾರಾಷ್ಟ್ರೀಯ ಸಾಧನೆಗಳಿಂದಾಗಿ ವಿಶ್ವವೇ ಭಾರತದತ್ತ ಕಣ್ತೆರೆದು ನೋಡುವಂತೆ ಮಾಡಿದ ವಿಶ್ವ ನಾಯಕಿ ಇಂದಿರಾ ಗಾಂಧಿ ಯವರು ಎಂದು ಗುಣಗಾನ ಮಾಡಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಶ್ರೀಮತಿ ಗೀತಾ ವಾಗ್ಲೇ, ಮತ್ತು ಕಾಪು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಪೂಜಾರಿಯವರು ಮಾತನಾಡಿ ದೇಶಕ್ಕಾಗಿ ಇಂದಿರಾಗಾಂಧಿಯವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿಸಿದರು. ಕಾರ್ಯಕ್ರಮದ ಪ್ರಯುಕ್ತ ಬಡ ಮಹಿಳೆಯರಿಗೆ ಪ್ರೋತ್ಸಾಹಧನ ಹಾಗೂ ದಿನಬಳಕೆಯ ವಸ್ತುಗಳನ್ನು ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಜನಸೇವೆ ಗೈಯುತ್ತಿರುವ ಮತ್ತು ಹಲವಾರು ಸಂಘ – ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಕಟಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರಭಾ ಬಿ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ, ರಕ್ಷಣಾಪುರ ಜವನೆರ್ ವೇದಿಕೆಯ ಅಧ್ಯಕ್ಷರಾದ ನವೀನ್ ಎನ್. ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ನಿಯಾಝ್, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಅಖಿಲೇಶ್ ಕೋಟ್ಯಾನ್, ಕಾಪು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜ್ ಎ. ಕೋಟ್ಯಾನ್, ಪುರಸಭಾ ಸದಸ್ಯರುಗಳಾದ ಫರ್ಜಾನ ಸಂಜಯ್, ಶೋಭಾ ಎ. ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ ಆನಂದ್, ಮೊಹಮ್ಮದ್ ಆಸೀಫ್, ಸತೀಶ್ ಚಂದ್ರ ಮೂಳೂರು, ಬಬ್ಬಣ್ಣ ನಾಯಕ್ ಕಾಪು, ಪ್ರಮುಖರಾದ ಕೆ. ಎಚ್. ಉಸ್ಮಾನ್, ನಯೀಮ್ ಕಟಪಾಡಿ, ಅಶ್ವಿನಿ ನವೀನ್ ಬಂಗೇರ,ಮಹೇಶ್ ಪೂಜಾರಿ ಕಟಪಾಡಿ, ಅಶೋಕ್ ನಾಯರಿ, ಹಮೀದ್ ಯೂಸುಫ್, ಐತಪ್ಪ ಕೋಟ್ಯಾನ್, ಪ್ರಭಾಕರ್ ಆಚಾರ್ಯ, ಸುನಂದಾ ಪಡುಬಿದ್ರಿ, ಸದಾನಂದ ಸುವರ್ಣ, ಆಶಾ ಶಂಕರ್ ಮತ್ತಿತರ ಮುಖಂಡರು, ಕಾರ್ಯಕರ್ತರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾಂತಲತಾ ಎಸ್. ಶೆಟ್ಟಿ ಯವರು ಸ್ವಾಗತಿಸಿದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಕಾಪು ನಿರೂಪಿಸಿದರು, ಸುಚರಿತಾ ಲಕ್ಷ್ಮಣ್ ವಂದಿಸಿದರು.




