ಮಂಗಳೂರು: ಮನೆಯ ಕಂಪೌಂಡ್‌ನೊಳಗೆ ಕಟ್ಟಿಹಾಕಿದ್ದ ದನಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಂದರ್ (41) ಎಂಬವರು ಮನೆಯಲ್ಲಿ ಸುಮಾರು 13 ದನಗಳನ್ನು ಸಾಕಿಕೊಂಡು ಪಶುಸಂಗೋಪನೆ ಮಾಡುತ್ತಿದ್ದರು.
ನವೆಂಬರ್ 12ರಂದು ರಾತ್ರಿ 11:30ರ ಸುಮಾರಿಗೆ ಎಂದಿನಂತೆ ಎಲ್ಲಾ ದನಗಳನ್ನು ಮನೆಯ ಕಂಪೌಂಡ್‌ನೊಳಗೆ ಕೂಡಿ ಹಾಕಿದ್ದರು.
ನವೆಂಬರ್ 13ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಕಂದು-ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ಎರಡು ದನಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ನವೆಂಬರ್ 13ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಕಂದು-ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ಎರಡು ದನಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಬಳಿಕ ನವೆಂಬರ್ 13ರಂದು ರಾತ್ರಿ ಉಳಿದ ದನಗಳನ್ನು ಮತ್ತೆ ಕಂಪೌಂಡ್‌ನೊಳಗೆ ಕೂಡಿ ಹಾಕಿದ್ದರು. ಆದರೆ ನವೆಂಬರ್ 14ರಂದು ಬೆಳಿಗ್ಗೆ 5 ಗಂಟೆಗೆ ಪರಿಶೀಲಿಸಿದಾಗ ಮತ್ತೆ ನಾಲ್ಕು ದನಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಒಟ್ಟು ಎರಡು ದಿನಗಳ ಅವಧಿಯಲ್ಲಿ ಆರು ದನಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಜಾನುವಾರುಗಳ ಅಂದಾಜು ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳವಾದ ದನಗಳು ಹಾಗೂ ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.



