Home Crime ಉಡುಪಿ: ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾದ ಕಳ್ಳರು…!!

ಉಡುಪಿ: ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾದ ಕಳ್ಳರು…!!

ಉಡುಪಿ: ನಗರದಲ್ಲಿ ತರಕಾರಿ ತೆಗೆದುಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ದುಷ್ಕರ್ಮಿಗಳು ಪರಾರಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಪಿರ್ಯಾದಿದಾರರು ಗೀತಾ ನಂಬಿಯಾರ್ (67)ಅಜ್ಜರಕಾಡು ಉಡುಪಿ ಇವರು,

ಸಂಜೆ ಸುಮಾರು 6:30ಕ್ಕೆ ಗೀತಾ ಅವರು ಉಡುಪಿ ಪೇಟೆಗೆ ಹೋಗಿ ತರಕಾರಿ ತೆಗೆದುಕೊಂಡು ಮನೆಗೆ ವಾಪಾಸು ನಡೆದುಕೊಂಡು ಬರುತ್ತಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದ 2ನೇ ಕ್ರಾಸ್ ಬಳಿಯಿಂದ ಉಡುಪಿ ಹೆರಿಟೇಜ್ ಪಕ್ಕದ ರಸ್ತೆಯಲ್ಲಿ ಬರುತ್ತಿರುವಾಗ ಅವರ ಹಿಂದಿನಿಂದ ಬೈಕೊಂದು ಎದುರಿನಿಂದ ಹೋಗಿ ಸುಮಾರು 10 ಅಡಿ ದೂರದಿಂದ ವಾಪಾಸು ತಿರುಗಿಸಿಕೊಂಡು ಬಂದಿದೆ.

ಬೈಕ್ ಸವಾರ ಬೈಕಿನ ಹೆಡ್‌ಲೈಟ್ ಅನ್ನು ಗೀತಾ ಅವರ ಮುಖಕ್ಕೆ ಹಾಕಿದ ಕಾರಣ ಕಣ್ಣು ಕಾಣದಂತಾಗಿದೆ. ಕೈಯನ್ನು ಕಣ್ಣಿಗೆ ಅಡ್ಡ ಹಿಡಿದು ನೋಡಿದಾಗ ಬೈಕ್ ಸವಾರ ಗೀತಾ ಅವರ ಬಳಿಗೆ ಬಂದಿದ್ದು, ಬೈಕಿನಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿ ಅವರ ಕುತ್ತಿಗೆಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು 1½ ಪವನ್ ಲಕ್ಷ್ಮಿ ಪೆಂಡೆಂಟ್ ಇರುವ ಚಿನ್ನದ ಚೈನ್‌ನ್ನು ಕುತ್ತಿಗೆಯಿಂದ ಸೆಳೆದುಕೊಂಡು ಪರಾರಿಯಾಗಿದ್ದಾರೆ.

ಈ ಸಮಯದಲ್ಲಿ ಗೀತಾ ಅವರನ್ನು ದೂಡಿದ ಕಾರಣ ಅವರು ರಸ್ತೆಗೆ ಬಿದ್ದು ಎಡಕೈ ಮೊಣಗಂಟಿಗೆ ಜಜ್ಜಿದ ರಕ್ತಗಾಯವಾಗಿದೆ. ಕಳವಾದ ಚಿನ್ನದ ಚೈನಿನ ಅಂದಾಜು ಮೌಲ್ಯ ಸುಮಾರು ರೂ. 1,50,000 ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.