Home Crime ಕುಂದಾಪುರ: ಝಿಗ್-ಝಾಗ್ ಬೈಕ್ ಸವಾರಿ ಪ್ರಶ್ನಿಸಿದ್ದಕ್ಕೆ ಯುವಕನಿಗೆ ಹಲ್ಲೆ…!!

ಕುಂದಾಪುರ: ಝಿಗ್-ಝಾಗ್ ಬೈಕ್ ಸವಾರಿ ಪ್ರಶ್ನಿಸಿದ್ದಕ್ಕೆ ಯುವಕನಿಗೆ ಹಲ್ಲೆ…!!

ಕುಂದಾಪುರ: ಝಿಗ್-ಝಾಗ್ ರೀತಿಯಲ್ಲಿ ಬೈಕ್ ಓಡಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಕೋಡಿಯಲ್ಲಿ ನಡೆದಿದೆ.

ಪಿರ್ಯಾದಿದಾರರು ತಂದೆ ಸಂಜೀವ ಪೂಜಾರಿ, ವಾಸ: ಹರಿ ಭಜನಾ ಮಂದಿರದ ಬಳಿ, ಕೋಡಿ ಗ್ರಾಮ ಇವರು,

ರಾತ್ರಿ 10:45ಕ್ಕೆ ಪಿರ್ಯಾದಿದಾರರು ಕುಂದಾಪುರ ತಾಲೂಕು ಹಳೆಅಳಿವೆಯಿಂದ ತಮ್ಮ ಮನೆಯಾದ ಕೋಡಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕೋಡಿ ಲೈಟ್ ಹೌಸ್ ಬಳಿ ತಲುಪಿದ್ದರು.

ಈ ವೇಳೆ ಎದುರುಗಡೆಯಿಂದ ಪರಿಚಯದ ನಾಗರಾಜ್ ಖಾರ್ವಿ KA 20 HF 1692 ನಂಬ್ರದ ಬೈಕ್‌ನ್ನು ಝಿಗ್-ಝಾಗ್ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಬಳಿ ನಿಲ್ಲಿಸಿದ್ದಾನೆ.

ಪಿರ್ಯಾದಿದಾರರು “ಯಾಕೆ ಈ ರೀತಿ ಬೈಕ್ ಓಡಿಸುತ್ತಿಯಾ” ಎಂದು ಕೇಳಿದಾಗ ಆರೋಪಿ “ನೀನು ಏನು ನನ್ನನ್ನು ವಿಚಾರಿಸುತ್ತಿಯಾ” ಎಂದು ಹೇಳಿದ್ದಾನೆ. ಪಿರ್ಯಾದಿದಾರರು ಬೈಕ್ ಸ್ಟಾರ್ಟ್ ಮಾಡಿ ಹೊರಟಾಗ ಆರೋಪಿ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು ಕೆನ್ನೆಗೆ ಕೈಯಿಂದ ಹೊಡೆದು, “ನನ್ನ ವಿಚಾರಕ್ಕೆ ಬಂದರೆ ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ.

ಸುಮಾರು ಒಂದು ತಿಂಗಳ ಹಿಂದೆ ಪಿರ್ಯಾದಿದಾರರ ತಂದೆಗೆ ಆರೋಪಿ ತೊಂದರೆ ನೀಡಿದ ಬಗ್ಗೆ ಪಿರ್ಯಾದಿದಾರರು ವಿಚಾರಿಸಿರುವುದೇ ಈ ಕೃತ್ಯಕ್ಕೆ ಕಾರಣವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.