Home Crime ಬಂಟ್ವಾಳ : ಮನೆಯ ಬೆಡ್‌ರೂಮ್ ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…!!

ಬಂಟ್ವಾಳ : ಮನೆಯ ಬೆಡ್‌ರೂಮ್ ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…!!

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬಡ್ಡೂರುಖಾನ್ ಎಂಬಲ್ಲಿ ಮನೆಯ ಬೆಡ್‌ರೂಮ್ ನಲ್ಲಿರುವ ಮಂಚದ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ.

ಮೃತರನ್ನು ವಿನ್ಸೆಂಟ್ ಡಿಸೋಜ (48) ಎಂದು ತಿಳಿಯಲಾಗಿದೆ ಮ

ವಿನ್ಸೆಂಟ್ ಡಿಸೋಜ ಅವರು ಕಳೆದ ಆರು ವರ್ಷಗಳಿಂದ ತಮ್ಮ ಸಂಬಂಧಿಕರಾದ ಜೈಸನ್ ಲೋಬೋ ಅವರ ಮನೆ ಹಾಗೂ ತೋಟದ ಕೆಲಸ ಮಾಡಿಕೊಂಡಿದ್ದರು.

ಅವಿವಾಹಿತರಾಗಿದ್ದ ಅವರು ಇದೇ ವಿಚಾರವಾಗಿ ಮನನೊಂದು ವಿಪರೀತ ಮದ್ಯ ಸೇವಿಸುತ್ತಿದ್ದು ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ಹೇಳಲಾಗಿದೆ.

ನ.10 ರಂದು ಬೆಳಗ್ಗೆ ನೆರೆಮನೆಯ ಸ್ಟ್ಯಾನಿ ಡಿಸೋಜ ಅವರ ದೂರವಾಣಿ ಕರೆಯಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.

ವಿನ್ಸೆಂಟ್ ಅವರು ಸುಮಾರು ಐದಾರು ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.