ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ವಾಲ್ತೂರು ಕೊಕ್ಕೋಡಿಗೆ ಹೋಗುವ ದಾರಿಯ ಬಳಿ ಗೇರು ಹಾಡಿಯಲ್ಲಿ ಮೇಯುತ್ತಿದ್ದ ದನವನ್ನು ದುಷ್ಕರ್ಮಿಗಳು ಕಳವಿಗೆ ಯತ್ನಿಸಿ, ಕಾರು ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಕಾವ್ರಾಡಿ ಗ್ರಾಮದ ಪ್ರಕಾಶ್ ಎಂಬವರ ದನವನ್ನು ಅ.15ರಂದು ಮಧ್ಯಾಹ್ನ ವೇಳೆ ದುಷ್ಕರ್ಮಿಗಳು ಕಾರಿಗೆ ತುಂಬಿಸಲು ಎಳೆದುಕೊಂಡು ಹೋಗಿ ಕಳವಿಗೆ ಯತ್ನಿಸುತ್ತಿದ್ದರು. ಈ ಸಂದರ್ಭ ವ್ಯಕ್ತಿಯನ್ನು ನೋಡಿ ಆರೋಪಿಗಳು ದನವನ್ನು ಬಿಟ್ಟು ಕಾರು ಮತ್ತು ಸ್ಕೂಟರ್ನಲ್ಲಿ ಪರಾರಿಯಾದರು. ಬಳಿಕ ಸುಮಾರು 2ಕಿ.ಮೀ. ದೂರದ ಕಾವ್ರಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರು ರಸ್ತೆಯ ಬದಿಯಲ್ಲಿ ಬಿಟ್ಟು ಸ್ಕೂಟಿಯಲ್ಲಿ ಓಡಿ ಹೋಗಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


