ಉಡುಪಿ: ಜಿಲ್ಲಾ ಆಯುಷ್ ಆಸ್ಪತ್ರೆಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯ ಸ್ಥಾಪಕರು, ದಾನಿಗಳಾದ ಉಡುಪಿ ವಿಶ್ವನಾಥ್ ಶೆಣೈೆಯವರು ರೋಗಿಗಳಿಗೆ ಅಗತ್ಯವಿರುವ ವೀಲ್ ಚೇರ್ ಮತ್ತು ವಾಕರ್ ಗಳನ್ನು ಆಸ್ಪತ್ರೆಯ ವೈಧ್ಯಧಿಕಾರಿಗಳಾದ ಡಾ. ಸತೀಶ್ ಆಚಾರ್ಯ ಹಾಗೂ ಜಿಲ್ಲಾ ಆಯುಷ್ ಆಫೀಸರ್, ಡಾ. ದಿನಕರ ಡೊಂಗ್ರೆ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್. ಪಿ, ಗೌರವ ಕಾರ್ಯದರ್ಶಿಯಾದ ಜನಾರ್ದನ ಕೊಡವೂರು, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ಧನ್, ಕತೆ ಕೇಳೋಣ ಸಂಚಾಲಕ ಸತೀಶ್ ಕೊಡವೂರು, ಕಲಾವಿದೆ ಪದ್ಮಾಸಿನಿ ಉದ್ಯಾವರ, ಪ್ರಜ್ಞಾ ಕೊಡವೂರು, ಉಮೇಶ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.