ಉಡುಪಿ: ಮನೆಯಿಂದ ಹೋದ ಮಹಿಳೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಕುಕ್ಕಿಕಟ್ಟೆಯಲ್ಲಿ ನಡೆದಿದೆ.
ನಾಪತ್ತೆಯಾದವರು ಶ್ರೀಮತಿ ಶಾಂತೇರಿ ನಾಯಕ್ (52), ವಾಸ: 2-ಬಿ-124, ಇಂದಿರಾನಗರ 6ನೇ ಕ್ರಾಸ್, ಕುಕ್ಕಿಕಟ್ಟೆ, 76-ಬಡಗುಬೆಟ್ಟು ಗ್ರಾಮ ಎಂದು ತಿಳಿಯಲಾಗಿದೆ ಮ
ಇವರು ದಸ್ತಾವೇಜು ಬರಹಗಾರರಾಗಿ ಕೆಲಸ ಮಾಡಿಕೊಂಡಿದ್ದರು.
ಮಗ ವೈಭವ್ ಬಿ. ನಾಯಕ್ (22) ನೀಡಿದ ದೂರಿನಂತೆ, ಕೌಟುಂಬಿಕ ಸಮಸ್ಯೆಯಿಂದಾಗಿ ತಂದೆ ಮತ್ತು ಅಕ್ಕ ಪ್ರತ್ಯೇಕವಾಗಿ ಬೇರೆ ಕಡೆ ವಾಸವಾಗಿದ್ದು, ಮನೆಯಲ್ಲಿ ವೈಭವ್ ಮತ್ತು ತಾಯಿ ಮಾತ್ರ ವಾಸ್ತವ್ಯವಿದ್ದರು.
ನ.10 ರಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಶಾಂತೇರಿ ನಾಯಕ್ ಅವರು ಕುಕ್ಕಿಕಟ್ಟೆ ಇಂದಿರಾನಗರ 6ನೇ ಕ್ರಾಸ್‌ನಲ್ಲಿರುವ ತಮ್ಮ ವಾಸ್ತವ್ಯದ ಮನೆಯಿಂದ ಹೋದವರು ಈವರೆಗೂ ವಾಪಾಸು ಬಾರದೆ ಕಾಣೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆ ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಾಂತೇರಿ ನಾಯಕ್ ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



