Home Crime ಕಾರ್ಕಳ: ಕನ್‌ಸ್ಟ್ರಕ್ಷನ್ ಕೆಲಸಕ್ಕೆ ಹೋದ ಯುವಕ ನಾಪತ್ತೆ : ಪ್ರಕರಣ ದಾಖಲು…!!

ಕಾರ್ಕಳ: ಕನ್‌ಸ್ಟ್ರಕ್ಷನ್ ಕೆಲಸಕ್ಕೆ ಹೋದ ಯುವಕ ನಾಪತ್ತೆ : ಪ್ರಕರಣ ದಾಖಲು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕನ್‌ಸ್ಟ್ರಕ್ಷನ್ ಕೆಲಸಕ್ಕೆ ಹೋದ ಯುವಕ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಸಬಾ ಗ್ರಾಮದ ನಿವಾಸಿ ನೂರ್‌ಜಹಾನ್ (88) ಅವರ ಮಗ ಮೊಹಮ್ಮದ್ ನಯಾಜ್ (33) ಕಾರ್ಕಳದಲ್ಲಿ ಕನ್‌ಸ್ಟ್ರಕ್ಷನ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೆ ಬಂದಿಲ್ಲ.

ಕುಟುಂಬದವರು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಾಯಿ ನೂರ್‌ಜಹಾನ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.