Home Crime ಕುಂದಾಪುರ: ಮರ ಕಟಿಂಗ್‌ ಮಷಿನ್‌ ರಿಪೇರಿ ವಿಚಾರದಲ್ಲಿ ಹಲ್ಲೆ, ಬೆದರಿಕೆ ಆರೋಪ : ಪ್ರಕರಣ ದಾಖಲು…!!

ಕುಂದಾಪುರ: ಮರ ಕಟಿಂಗ್‌ ಮಷಿನ್‌ ರಿಪೇರಿ ವಿಚಾರದಲ್ಲಿ ಹಲ್ಲೆ, ಬೆದರಿಕೆ ಆರೋಪ : ಪ್ರಕರಣ ದಾಖಲು…!!

ಕುಂದಾಪುರ: ಮರ ಕಟಿಂಗ್‌ ಮಷಿನ್‌ ರಿಪೇರಿ ಮಾಡಿಸಲು ತೆರಳಿದ್ದ ಯುವಕನ ಮೇಲೆ ಹಲ್ಲೆ ನಡೆಸಿ, ಕಟ್ಟರ್ ತೋರಿಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಡ್ಸೆ ಗ್ರಾಮದ ಹರೀಶ್ (24) ಎಂಬವರು ಮರ ಕಟಿಂಗ್‌ ಕೆಲಸ ಮಾಡಿಕೊಂಡಿದ್ದು, ಅಕ್ಟೋಬರ್ 20ರಂದು ಬೆಳಿಗ್ಗೆ ಆಲೂರು ಗ್ರಾಮದ ತಾರಿಬೇರು ಎಂಬಲ್ಲಿ ಮರ ಕಟಿಂಗ್‌ ಮಾಡುವ ವೇಳೆ ಮಷಿನ್‌ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ಸುಮಾರು 4:15ರ ವೇಳೆಗೆ ಚೇತನ್ ಎಂಬವರೊಂದಿಗೆ ಹೆಮ್ಮಾಡಿ ಜಂಕ್ಷನ್‌ನಿಂದ ಕೊಲ್ಲೂರು ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಶ್ರೀ ಯಕ್ಷಿ ಪವರ್ ಟೂಲ್ಸ್ ರಿಪೇರಿ ಅಂಗಡಿಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಅಂಗಡಿಯ ಮಾಲೀಕ ಮಣಿಕಂಠ ಆಚಾರ್ಯ ಎಂಬವರು ಅವಾಚ್ಯವಾಗಿ ಬೈದು, ಕಾಲಿನಿಂದ ಎದೆಗೆ ತುಳಿದು ಹಲ್ಲೆ ನಡೆಸಿದ್ದಾರೆ. ಬಳಿಕ ಕೈಯಲ್ಲಿದ್ದ ಕಟ್ಟರ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಹರೀಶ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.