Home Crime ಬ್ರಹ್ಮಾವರ: ಹಳೆ ಬಾವಿಯಲ್ಲಿ ವೃದ್ಧೆಯ ಮೃತದೇಹ ಪತ್ತೆ‌…!!

ಬ್ರಹ್ಮಾವರ: ಹಳೆ ಬಾವಿಯಲ್ಲಿ ವೃದ್ಧೆಯ ಮೃತದೇಹ ಪತ್ತೆ‌…!!

ಬ್ರಹ್ಮಾವರ, ಅಕ್ಟೋಬರ್ 8: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಚೇರ್ಕಾಡಿ ಗ್ರಾಮದ ಹಳೆ ಬಾವಿಯೊಂದರಲ್ಲಿ 70 ವರ್ಷದ ವೃದ್ಧೆಯ ಮೃತದೇಹ ಪತ್ತೆಯಾಗಿದೆ.

ಮೃತರು ಚೇರ್ಕಾಡಿ ನಿವಾಸಿ ರಾಧುಬಾಯಿ (70). ಅವರು ಕಳೆದ 3 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಉಡುಪಿಯ ಬಾಳಿಗಾ ಆಸ್ಪತ್ರೆ ಮತ್ತು ಕುಂದಾಪುರದ ಸತ್ಯಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ರಾಧುಬಾಯಿ ಅವರು ಕೆಲವು ದಿನ ಮಗ ರಘುರಾಮ ನಾಯ್ಕ್ (50) ಅವರ ಮನೆಯಲ್ಲಿ, ಇನ್ನು ಕೆಲವು ದಿನ ಕನ್ನಾರು ಕೋಡಿಯಲ್ಲಿರುವ ಮಗಳು ಸರೋಜಾ ಬಾಯಿ ಅವರ ಮನೆಯಲ್ಲಿ ಇರುತ್ತಿದ್ದರು.

ಅಕ್ಟೋಬರ್ 3ರಂದು ಮಧ್ಯಾಹ್ನ ಮಗನ ಮನೆಯಲ್ಲಿ ಊಟ ಮುಗಿಸಿ ಹೊರಗೆ ಹೋದ ರಾಧುಬಾಯಿ ವಾಪಸ್ ಬಂದಿರಲಿಲ್ಲ. ಅಕ್ಕನ ಮನೆಗೆ ಹೋಗಿದ್ದಾರೆ ಎಂದು ಮನೆಯವರು ಭಾವಿಸಿದ್ದರು.

ಅಕ್ಟೋಬರ್ 7ರಂದು ಸಂಜೆ ಮಗ ರಘುರಾಮ ಅವರು ಅಕ್ಕನ ಮಗಳು ಕಿಶೋರಿಗೆ ಕರೆ ಮಾಡಿ ವಿಚಾರಿಸಿದಾಗ, ಅಜ್ಜಿ ಅಕ್ಟೋಬರ್ 3ರ ರಾತ್ರಿಯೇ ಊಟ ಮುಗಿಸಿ ಹೋಗಿದ್ದಾರೆ ಎಂದು ಕಿಶೋರಿ ತಿಳಿಸಿದ್ದಾರೆ. ಅದೇ ದಿನ ರಾತ್ರಿ 8:30ಕ್ಕೆ ಕಿಶೋರಿ ಮನೆ ಪಕ್ಕದ ಹಳೆ ಬಾವಿಯಲ್ಲಿ ರಾಧುಬಾಯಿ ಅವರ ಮೃತದೇಹ ಕಂಡುಬಂದಿದೆ.

ಅಕ್ಟೋಬರ್ 3ರ ಸಂಜೆ 4:30ರಿಂದ ಅಕ್ಟೋಬರ್ 7ರ ರಾತ್ರಿ 8:30ರ ಮಧ್ಯೆ ಮಾನಸಿಕ ಖಾಯಿಲೆಯಿಂದ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಶಂಕೆ ಇದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 61/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.