ಉಡುಪಿ, ಅಕ್ಟೋಬರ್ 5: ರಾಜ್ ಫಿಶ್ ಮಿಲ್ ಹಾಗೂ M/S Malpe Manipal Ventures Pvt. Ltd. ಇದರ ನಿರ್ದೇಶಕಿ ಸುಪ್ರಿಯಾ ಪ್ರಮೋದ್ ರಾಜ್ ಅವರು ತಮ್ಮ ಸಂಸ್ಥೆಯ CSR Fund ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ಒಂದನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಿದ್ದಾರೆ.
ಅಕ್ಟೋಬರ್ 5ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಮೋದ್ ರಾಜ್ ಅವರು ಹಾಗೂ ಅವರ ಮಗಳು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್ ಅವರಿಗೆ ಜೀಪಿನ ಕೀ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಿಎಆರ್ ಉಪಾಧೀಕ್ಷಕ ತಿಮ್ಮಪ್ಪ ಗೌಡ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರವಿ ಕುಮಾರ್ ಉಪಸ್ಥಿತರಿದ್ದರು.


