ಕಾರ್ಕಳ: ದುರ್ಗಾ ಗ್ರಾಮದ ತೆಳ್ಳಾರು ಪಲಾಯಿ ಬಾಕ್ಯಾರು ಓಡದ ಕರಿಯ ಎಂಬಲ್ಲಿ ಹರಿಯುವ ದುರ್ಗಾ ತೆಳ್ಳಾರು ಹೊಳೆಯಲ್ಲಿ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಪಿತ್ರ ಪಕ್ಷದ ಪಿಂಡ ಪ್ರಧಾನ ಮಾಡಲು ಬಂದವರಿಗೆ ಹೊಳೆಯಲ್ಲಿ ಮೃತದೇಹ ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯರಾದ ವಿಜಯ ಸಫಲಿಗ (43) ಅವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅವರು ಊರಿನವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಮೃತದೇಹವು ಹೊಳೆಯಲ್ಲಿನ ಪೊದೆಯ ಕೋಲಿಗೆ ಸಿಲುಕಿಕೊಂಡಿರುವುದು ಕಂಡುಬಂದಿದೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸುಮಾರು ಒಂದು ವಾರದ ಹಿಂದೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಬೇರೆ ಯಾವುದಾದರೂ ಕಾರಣದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



