Home Crime ಹೆಬ್ರಿ: ಕೋಳಿ ಅಂಕ ಅಡ್ಡೆಗೆ ಖಾಕಿ ರೇಡ್ : 2 ಮಂದಿ ವಶಕ್ಕೆ…!!

ಹೆಬ್ರಿ: ಕೋಳಿ ಅಂಕ ಅಡ್ಡೆಗೆ ಖಾಕಿ ರೇಡ್ : 2 ಮಂದಿ ವಶಕ್ಕೆ…!!

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿಗಳ ಕಾಲಿಗೆ ಹರಿತವಾದ ಕತ್ತಿ ಕಟ್ಟಿ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ವರಂಗ ಗ್ರಾಮದ ತಲಮನೆ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಹೆಬ್ರಿ ಠಾಣೆಯ ಪಿಎಸ್‌ಐ ಚಂದ್ರ ಎ.ಕೆ. ಅವರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಂಜೆ 6:50ಕ್ಕೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಅಶೋಕ ಮತ್ತು ಪ್ರಶಾಂತ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಅಂದಾಜು 8 ಸಾವಿರ ರೂ. ಮೌಲ್ಯದ 8 ಕೋಳಿ ಹುಂಜ, 2 ಕೋಳಿ ಬಾಳು, 8 ಕೈಚೀಲ, 1 ಸಾವಿರ ರೂ. ನಗದು, ಕೋಳಿಗೆ ಕಟ್ಟಲು ಬಳಸಿದ 6 ಹಗ್ಗ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋಳಿ ಅಂಕದಲ್ಲಿ ಭಾಗಿಯಾಗಿದ್ದ ಹಲವರು ಪೊಲೀಸರ ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.