ಮಂಗಳೂರು: ವಿಶ್ವಹಿಂದೂಪರಿಷದ್ ಭಜರಂಗದಳ ಮಾತ್ರ ಶಕ್ತಿ ದುರ್ಗವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಮ್ಡೇಲು ಬಂಟ್ವಾಳ ಪ್ರಖಂಡ ಮಂಗಳೂರು ಗ್ರಾಮಂತರ ಜಿಲ್ಲೆಯ ವತಿಯಿಂದ 10ನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷ ಬಂಧನ ಕಾರ್ಯಕ್ರಮ ಕುಮ್ಡೇಲು ಕೊರ್ದಬ್ಬು ದೈವಸ್ಥಾನದಲ್ಲಿ ನಡೆಯಿತು..
ಕುಮ್ಡೇಲು ಕೊರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೆಶ್ವರ ಬಾಸ್ಕರ ಚೌಟ ಕಾರ್ಯಕ್ರಮ ಉದ್ಘಾಟನೆ ಮಾಡಿದರು..
ಕಶೆಕೋಡಿ ಸೂರ್ಯನಾರಾಯಣ ಭಟ್ ವರಾಮಹಾಲಕ್ಷ್ಮಿ ಹಬ್ಬದ ಸಾರಾಂಶವನ್ನು ಮಾತೆಯರಿಗೆ ತಿಳಿಸಿದರು..
ವಿಶ್ವಹಿಂದೂಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರು ಪ್ರಸಾದ್ ಕುಮಾರ್ ರೈ ರಕ್ಷಬಂಧನದ ಬೌದ್ದಿಕ್ ಅನ್ನು ನೆರವೇರಿಸಿದರು..
ಭಜರಂಗದಳ ಕುಮ್ಡೇಲು ಘಟಕದ ಸದಸ್ಯರು ಕಾರ್ಯಕರ್ತರು ಊರಿನ ಮಾತೆಯರು ಉಪಸ್ಥಿತರಿದ್ದರು.








