Home Crime ಬೈಂದೂರು: ಮನೆ ಕಳವು – ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ…!!

ಬೈಂದೂರು: ಮನೆ ಕಳವು – ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಳಜಿತ ಗ್ರಾಮದಲ್ಲಿ ಮನೆಯೊಂದರ ಬಾಗಿಲು ತೆರೆದು ಒಳನುಗ್ಗಿದ ಕಳ್ಳರು 3.64 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.

ಬೈಂದೂರು ತಾಲೂಕು ಯಳಜಿತ ಗ್ರಾಮದ ಕೆಳಕೋಟಿಕೇರೆ, ಹೌಸ್ ನಂ 1-183 ನಿವಾಸಿ ವನಿತಾ 41 ಗಂಡ ಸತೀಶ ಕೋಠಾರಿ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಬಾಗಿಲು ತೆರೆದು ಒಳಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯ ಒಳಗಿನ ಕೋಣೆಯಲ್ಲಿದ್ದ ಗೊಡ್ರೇಜ್‌ನ ಲಾಕರ್‌ನಲ್ಲಿ ಇರಿಸಿದ್ದ 52 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳುವಾದ ವಸ್ತುಗಳು ಕನಕ ಮಾಲೆ ಸರ,ಚಿನ್ನದ ಬಲ್ಬ್ ಚೈನ್, ರೋಪ್ ಚೈನ್ ಒಟ್ಟು ಕಳುವಾದ ಸೊತ್ತಿನ ಮೌಲ್ಯ: 3,64,000 ರೂ. ಅಂದಾಜಿಸಲಾಗಿದೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 113/2026 ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.