Home Crime ಬೆಂಗಳೂರು: ಬ್ರಹ್ಮಾವರ ಮೂಲದ ಯುವ ಸ್ಯಾಕ್ಸಫೋನ್ ವಾದಕಿ ಆತ್ಮ ಹತ್ಯೆ…!!

ಬೆಂಗಳೂರು: ಬ್ರಹ್ಮಾವರ ಮೂಲದ ಯುವ ಸ್ಯಾಕ್ಸಫೋನ್ ವಾದಕಿ ಆತ್ಮ ಹತ್ಯೆ…!!

ಬೆಂಗಳೂರು : ನಗರದಲ್ಲಿ ಸ್ಯಾಕ್ಸ ಫೋನ್ ವಾದಕಿ ಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಯುವತಿಯನ್ನು ನೀಲಾವರ ಗ್ರಾಮದ ನಮೃತಾ ದೇವಾಡಿಗ (22) ಎಂದು ಗುರುತಿಸಲಾಗಿದೆ.

ಅವರು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಯಾವುದೋ ಕಾರಣಕ್ಕೆ ಮನನೊಂದು ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದರು.

ಆತ್ಮಹತ್ಯೆ ಪ್ರಕರಣದ ದಾಖಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.