Home Latest “ದಿ ಮಾನ್ಸೂನ್ ಎಡಿಟ್” : ಉಡುಪಿಯಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ...

“ದಿ ಮಾನ್ಸೂನ್ ಎಡಿಟ್” : ಉಡುಪಿಯಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟಕ್ಕೆ ಚಾಲನೆ…!!

ಉಡುಪಿ: ನಗರದ ಜೋಡುಕಟ್ಟೆಯ ಡಯಾನಾ ಹೋಟೆಲ್‌ನಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟ “ದಿ ಮಾನ್ಸೂನ್ ಎಡಿಟ್” ಮಲ್ಹಾರ್ ಆಯೋಜಕರಾದ ವೈಶಾಲಿ ಶೆಟ್ಟಿ ಯವರ ಭರ್ಜರಿ ಫ್ಯಾಷನ್ ಮೇಳ ಆಯೋಜಿಸಲಾಗಿದ್ದು , ಮುಖ್ಯ ಅತಿಥಿಗಳಾಗಿ ಶ್ಯಾಮಲಾ ಕುಂದರ್ ,ವಿಜಯ ಬಂಗೇರಾ,ಪುಷ್ಪ ಜಿ ರಾವ್ ,ಶಾಮಿಲಿ,ಅನಿತಾ,ಮಮತಾ ಶೇಟ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಈ ಫ್ಯಾಷನ್ ಮೇಳದಲ್ಲಿ ವಿವಿಧ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು ಸೇರಿದಂತೆ ಹಲವಾರು ಹೊಸ ಫ್ಯಾಷನ್ ಉಡುಪುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ ಕೊರಿಯನ್ ಜುವೆಲ್ಲರಿ, ಆಂಟಿಕ್ ಜುವೆಲ್ಲರಿ, ಒನ್ ಗ್ರಾಮ್ ಜುವೆಲ್ಲರಿ, ಬ್ಯಾಗ್‌ಗಳು ಮತ್ತು ಬೆಡ್‌ಶೀಟ್‌ಗಳು ಸಹ ವಿಶೇಷ ರಿಯಾಯಿತಿಯಲ್ಲಿ ದೊರೆಯಲಿವೆ.

ಈ ಫ್ಯಾಷನ್ ಮೇಳ ಇಂದು ಕೊನೆ ದಿನವಾಗಿದೆ, ಫ್ಯಾಷನ್ ಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳುವಂ್ತೆ ಆಯೋಜಕರು ಮನವಿ ಮಾಡಿದ್ದಾರೆ.