Home Crime ಬಸ್ ಹಾಗೂ ಟಿಪ್ಪರ್ ಅಪಘಾತ ಪ್ರಕರಣ : ಟಿಪ್ಪರ್ ಚಾಲಕನ ಬಂಧನ…!!

ಬಸ್ ಹಾಗೂ ಟಿಪ್ಪರ್ ಅಪಘಾತ ಪ್ರಕರಣ : ಟಿಪ್ಪರ್ ಚಾಲಕನ ಬಂಧನ…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತ ಪ್ರಕರಣ ಆರೋಪಿಯಾದ ಬಸ್ ಚಾಲಕನನ್ನು ಪೊಲೀಸರು ‌ಬಂಧಿಸಿದ್ದಾರೆ.

ಬಂಧಿತ ಟಿಪ್ಪರ್ ಚಾಲಕ ರಾಘವೇಂದ್ರ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ: 1) ದಿನಾಂಕ: 05.01.2026 ರಂದು KA09F5026ನೇ ಬಸ್ಸಿನಲ್ಲಿ ಚಾಲಕ ಹನಮಂತಪ್ಪ ಸಿದ್ದಪ್ಪ ಮಡ್ಡಿ ಪೂಜಾರಿರವರು ಸಂಜೆ ಟ್ರಿಪ್‌ ಕುಂದಾಪುರದಿಂದ ಪ್ರಯಾಣಿಕರನ್ನು ಕರೆದುಕೊಂಡು ತಲ್ಲೂರು-ನೇರಳಕಟ್ಟೆ ಮಾರ್ಗವಾಗಿ ಆಜ್ರಿ ಕಡೆಗೆ ಬರುತ್ತಿರುವಾಗ ಸಂಜೆ 04:20ಗಂಟೆಗೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿಗೆ ತಲುಪುವಾಗ ಬಸ್ಸಿನ ಎದುರಿನಿಂದ ಅಂದರೆ ನೇರಳಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ ಒಂದು ಟಿಪ್ಪರ್‌ KL27A7100ನ್ನು ಅದರ ಚಾಲಕನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಸಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿರುತ್ತಾನೆ. ಈ ಘಟನೆಯಿಂದ ಬಸ್ಸಿನಲ್ಲಿದ್ದ 39 ಜನ ಪ್ರಯಾಣಿಕರ ಪೈಕಿ ಅಭಿಲಾಷ, ಆಶೀಶ್‌, ತನ್ವಿತ್‌, ಮಮತಾ, ಸತ್ಯಾವತಿ, ಮಂಜುನಾಥ, ಸ್ಪಂದನಾ, ಹರೀಶ್‌, ಶ್ರೀಮತಿ, ಉದಯ, ಸವಿತಾ, ಚೈತ್ರಾ, ಅರ್ಚನಾ, ಶಾರದಾ ಹಾಗೂ ಇತರರಿಗೆ ಸಾಮಾನ್ಯ ಹಾಗೂ ತೀವೃ ತರವಾದ ಗಾಯಗಳಾಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 01/2026 ಕಲಂ: 110, 303(2) BNS & 4(1A), 21(4) MMRD Act & 183, 146, 192 182 IMV Actರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದ ತನಿಖೆಯಲ್ಲಿ ಟಿಪ್ಪರ್‌ ಚಾಲಕನು ವಾಹನದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಮಣ್ಣು ಟಿಪ್ಪರ್‌ ನಲ್ಲಿ ತುಂಬಿಸಿಕೊಂಡು ಕಿರಿದಾದ ರಸ್ತೆಯಲ್ಲಿ ಓಡಿಸುವುದರಿಂದ ಎದುರುನಿಂದ ಬರುವ ವಾಹನಗಳಿಗೆ ಅಪಘಾತವಾಗಿ ಇದರಿಂದ ಪ್ರಯಾಣಿಕರಿಗೆ ಸಾವು ನೋವು ಉಂಟಾಗುವ ಸಾಧ್ಯತೆ ಇದೆ ಎನ್ನುವ ಅರಿವು ಇದ್ದರೂ ಸಹ ವಿಮಾ ಪತ್ರ, ಪರವಾನಿಗೆ ಇಲ್ಲದ KL27A7100ನೇ ಟಿಪ್ಪರ್‌ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಿತಿ ಮೀರಿದ ಮಣ್ಣನ್ನು ತುಂಬಿಸಿಕೊಂಡು ಸುರಕ್ಷತಾ ಕ್ರಮ ತೆಗೆದುಕೊಳ್ಳದೇ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದು ಪ್ರಯಾಣಿಕರಿಗೆ ತೀವೃ ಗಾಯ ನೋವು ಉಂಟಾಗಿರುವುದು ತಿಳಿದು ಬಂದಿರುತ್ತದೆ.

ಈ ಪ್ರಕರಣದಲ್ಲಿ 3 ಜನರನ್ನು ಆರೋಪಿಗಳೆಂದು ಪರಿಗಣಿಸಲಾಗಿದ್ದು, ಆರೋಪಿ 1) ಟಿಪ್ಪರ್‌ ಚಾಲಕ ರಾಘವೇಂದ್ರ, ಕುದಿ ಗ್ರಾಮ, ಕೊಕ್ಕರ್ಣೆ ಎಂಬಾತನು ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾನೆ. 2ನೇ ಆರೋಪಿ ಟಿಪ್ಪರ್‌ ಮಾಲಕರ ದಸ್ತಗಿರಿಗೆ ಬಾಕಿ ಇರುತ್ತದೆ. ಅಪಘಾತ ದಿನದಂದು ಈ ಟಿಪ್ಪರ್‌ ಲಾರಿಗೆ ಅನಧಿಕೃತವಾಗಿ ಮಣ್ಣನ್ನು ನೀಡಿದ 3ನೇ ಆರೋಪಿ ಶ್ರೀಧರ ಶೇರೆಗಾರ, ಕಲ್ಸಂಕ ರಸ್ತೆ, ಮೂಡ್ಕೇರಿ, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು, ಎಂಬುವರನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.

2) ದಿನಾಂಕ 07/01/2026ರಂದು ಬೆಳಿಗ್ಗೆ 10 ಗಂಟೆಗೆ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ, ಯುನಿಟಿ ಹಾಲ್‌ ಎದುರುಗಡೆ ರಾ.ಹೆ. 66ರಲ್ಲಿ ಆರೋಪಿ ಶ್ರೇಯಾಮ್ಸ್‌ ಜೈನ್‌ ಎಂಬುವರು KA20C6406ನೇ ಟಿಪ್ಪರ್‌ನಲ್ಲಿ ಹಳ್ನಾಡು ಗ್ರಾಮದಿಂದ ಮರಳನ್ನು ತುಂಬಿಸಿಕೊಂಡು, ಟಿಪ್ಪರನ್ನು ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ, ಸ್ಕೂಟಿ KA20HS4644ನೇ ದಕ್ಕೆ ಡಿಕ್ಕಿ ಹೊಡೆದುದರಿಂದ, ಸ್ಕೂಟಿ ಸವಾರ ಕೃಷ್ಣಮೂರ್ತಿ ಅಡಿಗ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 4/2026 ಕಲಂ. 281,106(1) BNSರಂತೆ ಪ್ರಕರಣೆ ದಾಖಲಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಗಣಿ ಸಂಬಂಧಿತ ಸಲಕರಣೆಗಳನ್ನು ಸರಭರಾಜು ಮಾಡುತ್ತಿರುವ ವಾಹನಗಳು ಅತೀಯಾದ ವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ರಿರುವುದರಿಂದ ಜಿಲ್ಲಾಡಳಿತದ ವತಿಯಾದ ಈ ರೀತಿಯ ವಾಹನಗಳಿಗೆ ಈ ಕೂಡಲೇ SPEED GOVERNOR ಅಳವಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.