Home Crime ಬ್ರಹ್ಮಾವರ : ವ್ಯಕ್ತಿಯೋರ್ವ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ…!!

ಬ್ರಹ್ಮಾವರ : ವ್ಯಕ್ತಿಯೋರ್ವ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವ್ಯಕ್ತಿಯೋರ್ವರು ಮನೆಯ ಮಾಡಿನ ಕಬ್ಬಿಣದ ಸರಳಿಗೆ ಸೀರೆಯನ್ನು ಬಳಸಿ ಕುತ್ತಿಗೆಗೆ ನೇಣು ಬಿಗಿದು ಆತ್ನಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಲಕ್ಷ್ಮಣ್ ಎಂದು ತಿಳಿಯಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾಧ ಸದಾನಂದ ಕೋಟ್ಯಾನ್‌ (45), ತಂದೆ: ಸೋಮಪ್ಪ ಕುಂದರ್‌, ವಾಸ: ಬಡಾ ನಿಡಿಯೂರು ಗ್ರಾಮ, ತೊಟ್ಟಂ ಉಡುಪಿ ಇವರ ತಮ್ಮನಾದ ಲಕ್ಷ್ಮಣ್‌ (43) ಎಂಬವರು ಯಾವುದೋ ಕಾರಣದಿಂದ ಮನನೊಂದು ದಿನಾಂಕ 04/01/2025 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ 05/01/2026 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವದಿಯಲ್ಲಿ ತನ್ನ ಮನೆಯ ಬಳಿ ಇರುವ ಕಮಾಂಡರ್‌ ಸ್ಪೋರ್ಟ್ಸ್‌ ಕ್ಲಬ್‌ ಒಳಗಡೆ ಹಾಲ್‌ ನಲ್ಲಿದ್ದ ಮಾಡಿನ ಕಬ್ಬಿಣದ ಸರಳಿಗೆ ಸೀರೆಯನ್ನು ಬಳಸಿ ಕುತ್ತಿಗೆಗೆ ನೇಣು ಬಿಗಿದು ಆತ್ನಹತ್ಯೆ ಮಾಡಿಕೊಂಡಿರುವುದಾಗಿದೆ.

ಬ್ರಹ್ಮಾವರ ಠಾಣೆ ಯುಡಿಆರ್ ಕ್ರಮಾಂಕ 01/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.