Home Crime ತೊಕ್ಕೊಟ್ಟು ಬಾರ್‌ನಲ್ಲಿ ತಲವಾರು ಹಿಡಿದು ಭೀಕರ ದಾಂಧಲೆ : ಇಬ್ಬರ ಬಂಧನ…!!

ತೊಕ್ಕೊಟ್ಟು ಬಾರ್‌ನಲ್ಲಿ ತಲವಾರು ಹಿಡಿದು ಭೀಕರ ದಾಂಧಲೆ : ಇಬ್ಬರ ಬಂಧನ…!!

ಮಂಗಳೂರು : ತೊಕ್ಕೊಟ್ಟು ಬಳಿಯ ವಿನಮ್ರ ಬಾರ್‌ನಲ್ಲಿ ಶನಿವಾರ ತಡರಾತ್ರಿ ತಲವಾರು ಹಿಡಿದು ಭೀಕರ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ನಿವಾಸಿ ಆಸ್ಪಕ್ ಹಾಗೂ ಆಟೋ ಚಾಲಕ ಮತ್ತು ರೌಡಿಶೀಟರ್‌ ಮೊಹಮ್ಮದ್ ಶಾಕೀರ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ ಸುಮಾರು 12ರಿಂದ 12.20ರ ವೇಳೆಗೆ, ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ಶಾಕೀರ್‌ ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾ ಓಡಾಡಿದ್ದಾನೆ ಎನ್ನಲಾಗಿದೆ. ಬಳಿಕ ವಿನಮ್ರ ಬಾರ್‌ಗೆ ತೆರಳಿ ತಲವಾರು ಬೀಸುತ್ತಾ ದಾಂಧಲೆ ನಡೆಸಿದ್ದು, ಬಾರ್‌ ಬಂದ್ ಮಾಡುವಂತೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಬಾರ್‌ನಲ್ಲಿದ್ದ ಗ್ರಾಹಕರು ಆತಂಕಗೊಂಡು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ ಎನ್ನಲಾಗಿದೆ. ಶಾಕೀರ್‌ಗೆ ಆಸ್ಪಕ್ ಸಾಥ್ ನೀಡಿದ್ದಾನೆ ಎಂದು ತಿಳಿದುಬಂದಿದೆ.