Home Karnataka News 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  ಪ್ರಕಟ…!!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  ಪ್ರಕಟ…!!

ನವದೆಹಲಿ: 2024ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಿದೆ. ‘ಶ್ರೀಕಾಂತ್’ ಚಿತ್ರ ‘ಅತ್ಯುತ್ತಮ ಹಿಂದಿ ಚಲನಚಿತ್ರ’ ಪ್ರಶಸ್ತಿ ಗೆದ್ದಿದೆ.

ಮಮ್ಮುಟ್ಟಿ ಮತ್ತು ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡರೆ, ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಕಾರ್ತಿಕ್ ಆರ್ಯನ್ ತಮ್ಮ ‘ಚಂದು ಚಾಂಪಿಯನ್’ ಚಿತ್ರಕ್ಕಾಗಿ ಮತ್ತು ಯಾಮಿ ಗೌತಮ್ ಆರ್ಟಿಕಲ್ 370 ಚಿತ್ರಕ್ಕಾಗಿ ಪ್ರಶಸ್ತಿ ಪಡೆದರು. ಧನುಷ್ ಅವರ ‘ರಾಯನ್’ ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ.

72 ನೇಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಜನವರಿ 1,2024 ಡಿಸೆಂಬರ್-31,2024 ನಡುವೆ ಸಿಬಿಎಫ್‌ಸಿ ಪ್ರಮಾಣೀಕರಿಸಲ್ಪಟ್ಟ ಚಿತ್ರಗಳಿಗೆ ಈ ಪ್ರಶಸ್ನಿ ನೀಡಲಾಗಿದೆ. ಕನ್ನಡದ ಮಿಥ್ಯ ಚಿತ್ರ ಅತ್ಯುತ್ತುಮ ಕನ್ನಡ ಚಿತ್ರವಾಗಿದೆ. ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನ ಬಾಲ ನಟ ಅತಿಶ್ ಶೆಟ್ಟಿಗೆ ಬಂದಿದೆ. ಇದೇ ಚಿತ್ರದ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಅಂತ ಬಂದ್ರೆ ಅಲ್ಲಿ ರೂಪಾ ವರ್ಕಾಡಿ ಅವರಿಗೆ ಬಂದಿದೆ. ಕನ್ನಡ ಚಿತ್ರ ಅಲ್ಲದೆ ಮತ್ಯಾವ ಚಿತ್ರಗಳಿಗೆ ಅವಾರ್ಡ್ ಬಂದಿವೆ ಎಂಬ ವಿವರಗಳು ಇಲ್ಲಿದೆ.

ಚಲನಚಿತ್ರ ಪ್ರಶಸ್ತಿಗಳು!

ಅತ್ಯುತ್ತಮ ತುಳು ಚಿತ್ರ – ಇಂಬು (ತುಳು)

ಅತ್ಯುತ್ತಮ ತೆಲುಗು ಚಿತ್ರ – ಸಮಿತಿ ಕುರೋಲು

ಅತ್ಯುತ್ತಮ ತಮಿಳು ಚಿತ್ರ – ರಾಯಾನ್

ಅತ್ಯುತ್ತಮ ಒಡಿಯಾ ಚಿತ್ರ – ಲಹರಿ

ಅತ್ಯುತ್ತಮ ಮರಾಠಿ ಚಿತ್ರ – ಮುಕ್ಕುಮ್ ಪೋಸ್ಟ್ ಬೊಂಬಿಲ್ವಾಲಿ
ಅತ್ಯುತ್ತಮ ಮಣಿಪುರಿ ಚಿತ್ರ – ಸುನಿತಾ

ಅತ್ಯುತ್ತಮ ಮಲಯಾಳಂ ಚಿತ್ರ – ಫೆಮಿನಿಚಿ ಫಾತಿಮಾ

ಅತ್ಯುತ್ತಮ ಕೊಂಕಣಿ ಚಿತ್ರ – ಮೋಗ್ ಅಸುಮ್

ಅತ್ಯುತ್ತಮ ಕನ್ನಡ ಚಿತ್ರ – ಮಿಥ್ಯ

ಅತ್ಯುತ್ತಮ ಹಿಂದಿ ಚಿತ್ರ – ಶ್ರೀಕಾಂತ್

ಅತ್ಯುತ್ತಮ ಗುಜರಾತಿ ಚಿತ್ರ – ಮಾರನ್

ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಸಾಮಾಜಿಕ – ಕ್ಯಾಪ್ಟನ್ ಮಿಲ್ಲರ್ (ತಮಿಳು)

ಅತ್ಯುತ್ತಮ ಜನಪ್ರಿಯ ಚಲನಚಿತ್ರ ಮನರಂಜನೆ – ಕಲ್ಕಿ 2898 AD (ತೆಲುಗು)

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ – ಸ್ವಾತಂತ್ರ್ಯ ವೀರ್ ಸಾವರ್ಕರ್ – ರಣದೀಪ್ ಹೂಡಾ

ಅತ್ಯುತ್ತಮ ಚಲನಚಿತ್ರ – ಆರ್ಟಿಕಲ್ 370.