ಉಡುಪಿ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ನಗರದ ಒಳಕಾಡು ಎಂಬಲ್ಲಿ ನಡೆದಿದೆ.
ಶೈಲಾ ವಿಲ್ಲೆಲೀನಾ (53) ಮತ್ತು ಮನೆಯವರು ರಾತ್ರಿ ಊಟ ಮಾಡಿ ಮಲಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು, ಕೋಣೆಯೊಂದರ ಕಪಾಟಿನಲ್ಲಿಟ್ಟಿದ್ದ 44.60 ಲಕ್ಷ ರೂ. ಮೌಲ್ಯದ 368 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.
ಬೆಳಗ್ಗೆ ಚರ್ಚ್‌ಗೆ ತೆರಳಲು ಚಿನ್ನಾಭರಣ ಧರಿಸಲು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



