Home Latest ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ...

ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಪಂದ್ಯಾಟ…!!

ಬೈಂದೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರುಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಥ್ರೋಬಾಲ್ ಪಂದ್ಯಾಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರಿನಲ್ಲಿ ಸಂಭ್ರಮದಲ್ಲಿ ನಡೆಯಿತು..

ಶಾಸಕ ಗುರುರಾಜ್ ಗುರುರಾಜ್ ಗಂಟಿಹೊಳೆ
ಅಂಕಣ ಮತ್ತು ಕ್ರೀಡಾ ಟ್ರೋಪಿಯನ್ನು ಅನಾವರಣಗೊಳಿಸಿ ಮಾತನಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಬಹಳ ಅದ್ದೂರಿಯಾಗಿ ಆಯೋಜನೆ ಮಾಡಿದ್ದೀರಿ ಭಾಗವಹಿಸಿದ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು.

ಕೃಷ್ಣಮೂರ್ತಿ ಮಂಜ, ಅಧ್ಯಕ್ಷರು ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ (ರಿ) ಮಾರಣಕಟ್ಟೆ ಚಿತ್ತೂರು, ಶಾಲಾ ದತ್ತು ದಾನಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಉತ್ತಮವಾಗಿ ಆಟವಾಡಿ, ನಿಮ್ಮ ಶಾಲೆ, ಊರಿಗೆ, ಜಿಲ್ಲೆಗೆ ಕೀರ್ತಿ ತನ್ನಿ ಎಂದ ಶುಭಹಾರೈಸಿದರು.

ಚಂದ್ರಶೇಖರ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಉಡುಪಿ ಅವರು ಮಾತನಾಡಿ ಭಾಗವಹಿಸಿದ ಪ್ರತಿಯೊಂದು ವಿದ್ಯಾರ್ಥಿಗಳು ಅಭಿನಂದನ ಸಲ್ಲಿಸಿ,ಇಲ್ಲಿ ಗೆದ್ದಂತ ವಿದ್ಯಾರ್ಥಿಗಳು
ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ
ಚಿಕ್ಕಮಂಗಳೂರಿನಲ್ಲಿ ನವಂಬರ್ 22 ನಡೆದ ವಿಭಾಗ ಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದರು.

ಖ್ಯಾತ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ನಿನ್ನೆ ಶುಕ್ರವಾರ ತಮ್ಮ 114 ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಹಿನ್ನೆಲೆಯಲ್ಲಿ ಶೋಕಾಚರಣೆ ಸಲ್ಲಿಸಲಾಯಿತು.

ಸಂಸ್ಥೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿಶ್ರೀ ರಾಜೇಶ ಎನ್ ದೇವಾಡಿಗ, ಅಧ್ಯಕ್ಷರು ಗ್ರಾಮ ಪಂಚಾಯತ್ ಆಲೂರು,ಸಿಂಗಾರಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್,ಆಲೂರು ಗ್ರಾಮ ಪಂಚಾಯತ್ ಸದಸ್ಯರಾದ
ಸುಬ್ಬಣ್ಣ ಶೆಟ್ಟಿ,ಪ್ರಸನ್ನ ಕುಮಾರ್ ಶೆಟ್ಟಿ,ರವಿ ಶೆಟ್ಟಿ,ವಿಜಯ ಕುಮಾರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ಬೈಂದೂರು ಮತ್ತು ನಾಲ್ಕು ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು,
ರಘುರಾಮ ದೇವಾಡಿಗ, ಸದಸ್ಯರು ಆಡಳಿತ ಮಂಡಳಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು
ಚಂದ್ರಶೇಖರ ಶೆಟ್ಟಿ, ಉದ್ಯಮಿಗಳು ಬೆಂಗಳೂರು
ಭರತ್ ಶೆಟ್ಟಿ,ಎಚ್. ಮಂಜಯ್ಯ,ಇಂದಿರಾ ಶೆಟ್ಟಿ,ಶ್ರೀ ಚಂದ್ರಯ್ಯ ಆಚಾರ್ಯ ಕಳಿ,ಶರತ್ ಪೂಜಾರಿ, ಅಧ್ಯಕ್ಷರು ಎಸ್.ಡಿ.ಎಂ.ಸಿ ಶ್ರೀ ವಿಜಯ ಕುಮಾರ ಶೆಟ್ಟಿ, ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಜಿಲ್ಲೆ,ನಾಲ್ಕು ವಲಯದ ಗ್ರೇಡ್ ಒನ್ ಮತ್ತು ಗ್ರೇಡ್ ಟು ದೈಹಿಕ ಶಿಕ್ಷಣ ಶಿಕ್ಷಕರು,ನಾರಾಯಣ ಶೆಟ್ಟಿ, ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢಶಾಲೆ, ಅಲೂರು,ದತ್ತಾತ್ರೇಯ ಭಟ್,ದಿನಕರ, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲೂರು,ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ (ರಿ.) ಮಾರಣಕಟ್ಟೆ ಚಿತ್ತೂರು, ಮುಖ್ಯ ಶಿಕ್ಷಕರು ಮತ್ತು ಅಧ್ಯಾಪಕ ವೃಂದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಹಳೆ ವಿದ್ಯಾರ್ಥಿ ಸಂಘ,
ಅಧ್ಯಕ್ಷರು ಮತ್ತು ಸರ್ವಸದಸ್ಯರು SDMC
ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ರಾಷ್ಟ್ರೀಯ ನಿರೂಪಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಲೀಲಾ ಕಾರ್ಡಿನ್ ಸ್ವಾಗತಿಸಿದರು.

ಸಂಸ್ಥೆಯ ದೈಹಿಕ ಶಿಕ್ಷಕರಾದ ವೀರೇಂದ್ರ ಜೋಗಿ ವಂದಿಸಿದರು.