Home Latest ಜಯ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷರಿಗೆ ನೇಮಕಾತಿ ಪತ್ರ ಹಸ್ತಾಂತರ..!!

ಜಯ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷರಿಗೆ ನೇಮಕಾತಿ ಪತ್ರ ಹಸ್ತಾಂತರ..!!

ಉಡುಪಿ: ಶ್ರೀ ಲೂಯಿಸ್ ಎಂ. ಅವರನ್ನು ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲೆ ಜಿಲ್ಲಾ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದ್ದು, “ಕಟ್ಟೋಣ ನಾವು ಹೊಸ ನಾಡೊಂದನು” ಎಂಬ ಶೀರ್ಷಿಕೆಗೆ ಬದ್ಧರಾಗಿ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನಾಡಿನ, ನೆಲ, ಜಲ, ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಜಯ ಕರ್ನಾಟಕ ಸಂಘಟನೆಯ ನಿಯಮಾವಳಿಯ ಪ್ರಕಾರ ನೇಮಕ ಪತ್ರವನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ರಾಜ್ಯ ಅಧ್ಯಕ್ಷರಾದ ಬಿ. ಎನ್. ಜಗದೀಶ್ ಮತ್ತು ರಾಜ್ಯ ಸಮಿತಿಯ ಮುಖ್ಯ ಸಲಹೆಗಾರರಾದ ಪ್ರಕಾಶ್ ರೈ ಹಾಗೂ ರಾಜ್ಯ ಸಮಿತಿಯ ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ನೂತನ ಉಡುಪಿ ಜಿಲ್ಲಾ ಅಧಕ್ಷರಾದ ಲೂಯಿಸ್ ಎಂ.. ಕರುಣಾಕರ್ ಪೂಜಾರಿ, ನಿತ್ಯಾನಂದ ಅಮೀನ್, ರತ್ನಾಕರ ಮೊಗವೀರ, ಸುಬ್ರಮಣ್ಯ ಪೂಜಾರಿ, ಮಹೇಶ್ ಕೋಟ್ಯಾನ್ ಉಪಸ್ಥಿತಿಯೊಂದಿಗೆ ರಾಜ್ಯ ಅಧಕ್ಷರಾದ ಬಿ. ಎನ್. ಜಗದೀಶ್ ಹಾಗೂ ಮುಖ್ಯ ಸಲಹೆಗಾರರಾದ ಪ್ರಕಾಶ್ ರೈ ಅವರಿಗೆ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಹೂಗುಚ್ಛ ನೀಡಿ ಗೌರವಿಸಲಾಯಿತು.