ಮಲ್ಪೆ : ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ತೆಂಕನಿಡಿಯೂರು ಗ್ರಾಮದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಬೈಲಕರೆ ನಾಗಬನ ಬಳಿ ರಸ್ತೆ ಅಭಿವೃದ್ಧಿಗೆ 20 ಲಕ್ಷ, ಕೆಳಾರ್ಕಳಬೆಟ್ಟು ಭೋಜರಾಜ ಕಾಂಪೌಂಡ್ ಕೊಜಕುಳಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ, ಅಂಬಿಕಾ ವೈಟ್ ರಸ್ತೆ ಹಾಗೂ ಲಕ್ಷ್ಮೀ ನಗರ 9ನೇ ಕ್ರಾಸ್ ರಸ್ತೆ ಅಭಿವೃದ್ಧಿಗೆ 15 ಲಕ್ಷ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪ್ರಗತಿ ಲೇಔಟ್ ನಲ್ಲಿ 8.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿಯೂ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸ್ಥಳೀಯ ಶರತ್ ಬೈಲಕೆರೆ, ವಿಜಯ ಪ್ರಕಾಶ್, ವಿನೋದ್ ಸುವರ್ಣ, ಚರಣ್ ರಾಜ್, ಅರುಣ್ ಜತ್ತನ್, ಸತೀಶ್ ಬೈಲಕೆರೆ, ಕೃಷ್ಣ ಶೆಟ್ಟಿ, ಗಾಯತ್ರಿ, ಮಾಲಿನಿ ಜತ್ತನ್, ಶಾಲಿನಿ, ಪುಷ್ಪ, ಪ್ರಶಾಂತ್ ಹೆಬ್ಬಾರ್, ರೇಖಾ, ಗೀತಾ ಶೆಟ್ಟಿ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು



