Home Crime ಮಂಗಳೂರು : ಅಕ್ರಮ ಮರಳು ಸಾಗಾಟ : ಪೊಲೀಸರಿಂದ ದಾಳಿ…!!

ಮಂಗಳೂರು : ಅಕ್ರಮ ಮರಳು ಸಾಗಾಟ : ಪೊಲೀಸರಿಂದ ದಾಳಿ…!!

ಮಂಗಳೂರು : ನಗರದ ಸಮೀಪ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಿ ದಾಸ್ತಾನು ಮಾಡುವ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸರು ಮರಳು ಸಾಗಾಟ ಸ್ಥಳಕ್ಕೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿ JNANASHEKAR ರವರು ದಿನಾಂಕ 10/10/2025 ರಂದು 12:30 ಗಂಟೆಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಣಂಬೂರು ಗ್ರಾಮದ ತಣ್ಣೀರುಬಾವಿ, ನಾಯರ್ ಕುದ್ರು ಎಂಬಲ್ಲಿಗೆ ಮಧ್ಯಾಹ್ನ 1.15 ಗಂಟೆಗೆ ತಲುಪಿ ನೋಡಿದಾಗ ಅಲ್ಲಿ ಕ್ಲಾಡಿ ಡಿಲೀಮಾ ಪ್ರಾಯ 62 ವರ್ಷ ಎಂಬ ವ್ಯಕ್ತಿಯು ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡಿ ಅಕ್ರಮ ಸಂಪಾದನೆಯ ಉದ್ದೇಶದಿಂದ ಅಕ್ರಮವಾಗಿ ಹಿಟ್ಟಾಚಿ ಯಂತ್ರದ ಮೂಲಕ ಮರಳು ತೆಗೆದು KA19AF4769 ಗೆ ಲೋಡ್ ಮಾಡಿ ತನ್ನ ಮನೆಯ ಹಿಂದೆಯೇ ಅಕ್ರಮ ದಾಸ್ತಾನು ಇರಿಸಿದ್ದು, ಈ ಮರಳು ಸರಕಾರಕ್ಕೆ ಸೇರಿದ ಭೂಮಿಯ ಆಳದಲ್ಲಿರುವ ಮರಳನ್ನು ಅಕ್ರಮವಾಗಿ ಯಾವುದೇ ಅನುಮತಿ ಯಾ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹಿಟ್ಟಾಚಿ ಯಂತ್ರದ ಮೂಲಕ ತೆಗೆದು, ಟಿಪ್ಪರ್ ಮೂಲಕ ಸಾಗಾಟ ಮಾಡಿ ದಾಸ್ತಾನು ಇರಿಸಿದ್ದು, ಈ ತಕ್ಷೀರಿಗೆ ಸಂಬಂದಿಸಿದ ಮರಳು, ಹಿಟಾಚಿ ಯಂತ್ರ ಮತ್ತು ಟಿಪ್ಪರ್ ಗಳ ವಿರುದ್ದ ಹಾಗೂ ಜಮೀನಿನ ಮಾಲಕ ಕ್ಯಾಡಿ ಡಿಲೀಮಾ ಹಾಗೂ ಹಿಟಾಚಿ ಮತ್ತು ಟಿಪ್ಪರಿನ ಮಾಲಕರ ವಿರುದ್ದ ಸೂಕ್ತ ಕ್ರಮಕ್ಕಾಗಿ ಹಾಗೂ ಇವುಗಳು ಒಟ್ಟು ಅಂದಾಜು ಮೌಲ್ಯ ರೂಪಾಯಿ 8,05,000/- ಆಗಬಹುದು ಎಂಬಿತ್ಯಾದಿ.