ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ನದಿಯಲ್ಲಿ ಅಕ್ರಮವಾಗಿ ದೋಣಿಗಳಿಂದ ಮರಳು ತೆಗೆದು ಸಾಗಾಟ ಮಾಡುತ್ತಿರುವಾಗ ಮಲ್ಪೆ ಪೊಲೀಸರು ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.
ಪೊಲೀಸರು ದಾಳಿ ನಡೆಸಿ ಮರಳು ತೆಗೆಯಲು ಬಳಸಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ದಿನಾಂಕ 12/10/2025 ರಂದು ಮಧ್ಯಾಹ್ನ ಅನೀಲ್ ಕುಮಾರ್ ಡಿ ,ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀಸ್ ಠಾಣೆ ಇವರು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಅಡ್ಡಬೇಂಗ್ರೆ ಪೆರ್ಲಕಡಿ ಎಂಬಲ್ಲಿ ಸ್ವರ್ಣ ನದಿಯಿಂದ ಕೆಲವು ಜನರು 3 ದೋಣಿಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳವನ್ನು ತಲುಪಿ ನೋಡಲಾಗಿ ಸ್ವರ್ಣ ನದಿಯಿಂದ ಕೆಲವು ಜನರು 3 ದೋಣಿಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದು ಕಂಡು ಬಂದಿದ್ದು, ಹೊಳೆಯ ಮಧ್ಯದಲ್ಲಿ ಮರಳನ್ನು ತೆಗೆಯುತ್ತಿದ್ದ ಆರೋಪಿತರು ಸಮವಸ್ತ್ರದಲ್ಲಿದ್ದವನ್ನು ನೋಡಿ, ದೋಣಿಗಳನ್ನು ನದಿಯಲ್ಲಿಯೇ ಬಿಟ್ಟು, ನದಿಯ ಇನ್ನೊಂದು ಬದಿಯ ದಡಕ್ಕೆ ಈಜಿಕೊಂಡು ಹೋಗಿ ಪರಾರಿಯಾಗಿರುತ್ತಾರೆ. ನದಿಯಲ್ಲಿರುವ 3 ದೋಣಿಗಳಲ್ಲಿ ಮರಳು ಹಾಕಿರುವುದು ಕಂಡು ಬಂದಿರುತ್ತದೆ. ನಂತರ 3 ದೋಣಿಗಳನ್ನು ಪರಿಶೀಲಿಸಲಾಗಿ, ಎಲ್ಲಾ 3 ದೋಣಿಗಳು ಮರದ ದೋಣಿಗಳಾಗಿದ್ದು, ಇವುಗಳ ಅಂದಾಜು ಮೌಲ್ಯ ರೂಪಾಯಿ 1,50,000/- , 3 ದೋಣಿಗಳಲ್ಲಿ ಸೇರಿ ಒಟ್ಟು 1 ಯುನಿಟ್ ನಷ್ಟು ಮರಳು ಇದ್ದು, ಜೊತೆಗೆ ದೋಣಿಯಲ್ಲಿ 3 ಕಬ್ಬಿಣದ ಬಕೆಟ್‌ಗಳು ,ಮರಳು ತೆಗೆಯುವ 3 ಕಬ್ಬಿಣದ ಸಲಾಕೆಗಳು ಇರುವುದು ಕಂಡು ಬಂದಿರುತ್ತದೆ. ಆರೋಪಿತರು ಸದರಿ ಸ್ಥಳದಲ್ಲಿ ಮರಳನ್ನು ತೆಗೆಯಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿರುವುದಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2025, ಕಲಂ:303(2) BNS & 4, 4(a) MMDR Act ರಂತೆ ಪ್ರಕರಣ ದಾಖಲಾಗಿರುತ್ತದೆ.