ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪ ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ದಾಳಿ ನಡೆಸಿದ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ ಪೊಲೀಸರ ತಂಡ ಮೂರು ಲಾರಿಗಳನ್ನು ವಶಪಡಿಸಿಕೊಂಡು 4 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರು ಲಾರಿ ಚಾಲಕ ಇಟ್ಬಾಲ್ ಮೋಂಟೆಪದವು, ಮಾಲಕ ಶಫೀಕ್, ಚಾಲಕರಾದ ಅಮ್ಮೆಂಬಳ ನಿವಾಸಿ ಝನುದ್ದೀನ್, ಮನೋಜ್ ಕುಮಾರ್ ಎಂದು ತಿಳಿದು ಬಂದಿದೆ.ಪೊಲೀಸರು ಕೆಂಪು ಕಲ್ಲು ಸಾಗಾಟದ ಒಂದು ಲಾರಿಯನ್ನು ಉಳ್ಳಾಲ ಪೊಲೀಸರು ತಲಪಾಡಿ ಯಲ್ಲಿ ಹಾಗೂ ಎರಡು ಲಾರಿಗಳನ್ನು ತೌಡುಗೋಳಿ ಬಳಿ ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಜನಾಡಿ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಪಿಸಿ ಮುಹಮ್ಮದ್ ಗೌಸ್ ರವರ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದಾಗ ಒಂದು ಲಾರಿಯಲ್ಲಿ 250 ಕೆಂಪುಕಲ್ಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕೇರಳ ಕಡೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಪೊಲೀಸರು ಲಾರಿ ಹಾಗೂ ಕೆಂಪು ಕಲ್ಲುಗಳನ್ನು ವಶಪಡಿಸಿಕೊಂಡು, ಚಾಲಕ ಅಮ್ಮೆಂಬಳ ನಿವಾಸಿ ಮೈನುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗುರುವಾರ ತೌಡುಗೋಳಿ ಬಳಿ ಟಿಪ್ಪರ್ ಲಾರಿಯಲ್ಲಿ 250 ಕೆಂಪುಕಲ್ಲುಗಳನ್ನು ಅಕ್ರಮ ವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಚಾಲಕ ಮನೋಜ್ ಕುಮಾರ್ ಪರವಾನಿಗೆ ಹಾಗೂ ರಾಜಧಾನ ಪಾವತಿ ರಸೀದಿ ಇಲ್ಲದೆ ಕೇರಳದ ಬಾವಲಿಗುರಿಯಿಂದ ಕಲಿ.ಂಜ ಕಡೆಗೆ ಕಲುಗಳನು.ಈ ಲಾರಿ ಹಾಗೂ ಕೆಂಪುಕಲ್ಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣ ಸಂಬಂಧ ಲಾರಿ ಚಾಲಕ ಹೈನುದ್ದೀನ್ ಮತ್ತು ಮನೋಜ್ ಕುಮಾರ್ ಅವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಉಳ್ಳಾಲ, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.