Home Karavali Karnataka ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ…!!

ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ…!!

ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ನಡೆದಿದೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಿಕ್ಕಿಲ್ಲದ ಅಪರಿಚಿತ ಮಹಿಳೆಗೆ, ತೆಂಕಪೇಟೆಯ ನರಸಿಂಹ ಭಟ್ ಎನ್ನುವರು, ಮಾನವಿತೆಯ ನೆಲೆಯಲ್ಲಿ ಚಿಕಿತ್ಸೆಯ ನಂತರ ವಿಶ್ರಮಿಸಲು ಅವಕಾಶ ನೀಡಿದ್ದಲ್ಲದೆ, ಊಟೋಪಚಾರ ಔಷಧೋಪಚಾರದ‌ ವ್ಯವಸ್ಥೆಗೊಳಿಸಿದ್ದರು. ಹೀಗಿರುವಾಗ ಕೆಲವು ದಿನಗಳಿಂದ ಮಹಿಳೆಯ ಆರೋಗ್ಯ ಏರುಪೇರಾಗಿದ್ದು ಅವರು ಒಳಕಾಡುವರ ನೆರವು ಪಡೆದಿದ್ದರು.

ಮಹಿಳೆಯ ಹೆಸರು ಶರ್ವಾಣಿ ಕೆ 37(ವ) ಎಂದಷ್ಟೆ ತಿಳಿದುಬಂದಿದೆ. ವಾರಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.