Home Kundapura News ಕುಂಬಾಶಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; 7 ಮಂದಿಯ ವಿರುದ್ಧ ಪ್ರಕರಣ ದಾಖಲು

ಕುಂಬಾಶಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; 7 ಮಂದಿಯ ವಿರುದ್ಧ ಪ್ರಕರಣ ದಾಖಲು

ಕುಂದಾಪುರ : ತೆಕ್ಕಟ್ಟೆ ಗ್ರಾಮದ ರಾಘವೇಂದ್ರ (29) ಅವರು ನೀಡಿದ ದೂರಿನಂತೆ, ಅವರ ಸಹೋದರ ರಂಜಿತ್ ಮೇಲೆ ಕುಂಬಾಶಿಯ ಕೊರವಡಿ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.

ದಿನಾಂಕ 17/05/2026 ರಂದು ರಾತ್ರಿ ಸುಮಾರು 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ರಂಜಿತ್, ಮಳೆಯ ಕಾರಣದಿಂದ ಕುಂಬಾಶಿಯ ಕೊರವಡಿಯಲ್ಲಿ ಇರುವ ಶ್ರೀ ಸಿದ್ದಿ ಜನರಲ್ ಸ್ಟೋರ್ ಎದುರು ಬೈಕ್ ನಿಲ್ಲಿಸಿಕೊಂಡಿದ್ದರು. ಈ ವೇಳೆ ಆರೋಪಿತರಾದ ವಿಕಾಸ ಪೂಜಾರಿ, ಶರತ್ ಪೂಜಾರಿ, ಮಹೇಂದ್ರ ಪೂಜಾರಿ, ಸುಕೇಶ್ ಪೂಜಾರಿ, ಅಬಿಲಾಷ್ ಪೂಜಾರಿ, ಮಂಜುನಾಥ ಹಾಗೂ ಸಂದೇಶ ಎಂಬವರು ಒಟ್ಟಾಗಿ ಸೇರಿ ಸೋಡಾ ಬಾಟಲಿ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ರಂಜಿತ್ ಅವರ ತುಟಿ ಹಾಗೂ ದವಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ವಿಚಾರ ತಿಳಿದ ರಾಘವೇಂದ್ರ ಅವರು ಸ್ಥಳಕ್ಕೆ ಬಂದು ತಮ್ಮನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ದಿನಾಂಕ 18/05/2026 ರಂದು ಬೆಳಿಗ್ಗೆ ರಂಜಿತ್ ಎದ್ದೇಳುವ ಸ್ಥಿತಿಯಲ್ಲಿರದ ಕಾರಣ ಅವರನ್ನು ಮೊದಲು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ರಂಜಿತ್ ಹಾಗೂ ಆರೋಪಿತರ ನಡುವೆ ಇದ್ದ ಹಳೆಯ ದ್ವೇಷವೇ ಘಟನೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಕುಂದಾಪುರ ಪೊಲೀಸ್ ಸ್ಟೇಷನ್ನ ಲ್ಲಿ l ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.