Home Latest ಫೇಸ್ ಬುಕ್ ಪೊಸ್ಟ್ ಪ್ರಕರಣ : ಬ್ರಹ್ಮಾವರ ಪೊಲೀಸರಿಂದ ಇಬ್ಬರ ಬಂಧನ…!!

ಫೇಸ್ ಬುಕ್ ಪೊಸ್ಟ್ ಪ್ರಕರಣ : ಬ್ರಹ್ಮಾವರ ಪೊಲೀಸರಿಂದ ಇಬ್ಬರ ಬಂಧನ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಿನಾಂಕ 29-01-2026 ರಂದು ದ್ವೇಷ ಭಾಷಣ ಪ್ರಕರಣ ದಾಖಲಾಗಿರುವ ಅಪರಾಧ ಕ್ರಮಾಂಕ 19/2026 ಪ್ರಕರಣದಲ್ಲಿ ಇಬ್ಬರು ಆರೋಪಿತರನ್ನು ಬ್ರಹ್ಮಾವರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಪೇಸ್‌ ಬುಕ್ ನಲ್ಲಿ ಪ್ರಚೋದನಕಾರಿ ಪೊಸ್ಟ್ ಮಾಡಿರುವ ಕುರಿತು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರಭು ಡಿ.ಟಿ ಅವರ ನಿರ್ದೇಶನದಂತೆ, ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಸಂತೋಷ ಕುಮಾರ್ ಶೆಟ್ಟಿ (56) ಮತ್ತು ಕೆ. ನಾಗರಾಜ (62) ಅವರನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಕಾನೂನು ಕ್ರಮ ಜಾರಿಯಲ್ಲಿದೆ.