ಹಾಸನ : ಹಾಸನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪೆನ್‌ಡ್ರೈವ್ ಮೂಲಕ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ವಿಶೇಷ ತನಿಖಾ ತಂಡ (SIT) ಈ ಸಂಬಂಧ ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದೆ.
ಚಾರ್ಜ್‌ಶೀಟ್‌ನಲ್ಲಿ ಒಟ್ಟು 52 ಜನರ ಹೆಸರು ಉಲ್ಲೇಖವಾಗಿದ್ದು, ಅವರಲ್ಲಿ 39 ಮಂದಿಯ ವಿರುದ್ಧ ಆರೋಪಗಳು ದೃಢಪಟ್ಟಿವೆ ಎಂದು SIT ತಿಳಿಸಿದೆ. ಉಳಿದವರ ವಿರುದ್ಧ ತನಿಖೆ ಮುಂದುವರಿದಿದೆ ಎಂಬ ಮಾಹಿತಿ ಲಭಿಸಿದೆ.
ಪ್ರಮುಖ ಆರೋಪಿಗಳಾಗಿ A1 ನವೀನ್, A2 ಕಾರ್ತಿಕ್ ಎನ್. (ಕಾರು ಚಾಲಕ), A3 ಚೇತನ್ ಬಿ.ಸಿ, A4 ಚೇತನ್ ವೈ.ಎಸ್. ಹಾಗೂ A5 ಲಿಖಿತ್ ಗೌಡರನ್ನು ಗುರುತಿಸಲಾಗಿದೆ. ಇವರು ವಿಡಿಯೋಗಳ ಚಿತ್ರೀಕರಣ, ಸಂಗ್ರಹಣೆ ಹಾಗೂ ಹಂಚಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ.
ಪ್ರಕರಣದಲ್ಲಿ ಹಲವು ಆರೋಪಿಗಳ ಹೆಸರುಗಳು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದ್ದು, ತನಿಖೆ ಮುಂದುವರಿದಿದೆ.



