ಸಿಂಧನೂರು: ಮಾ.11: ಸಿಂಧನೂರು ತಾಲೂಕು ವ್ಯಾಪ್ತಿಯ ಸಿದ್ರಾoಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ವತಿಯಿಂದ 2025-26 ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಳಗ್ಗೆ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಸೇರಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೇಶವಮೂರ್ತಿ ಬಿವಿ ಶಿಕ್ಷಕರು ಇವರು ಡಿವಿಜಿ ಯವರ ಪದ್ಯದ ಸಾಲುಗಳನ್ನು ಹೇಳುವುದರ ಮೂಲಕ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.ಪ್ರಸ್ತಾವಿಕ ನುಡಿಯನ್ನು ಮಂಜುನಾಥ ಹೆಡಗಿನಾಳ ನುಡಿದರು ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ವಿರೂಪಣ್ಣ ವಹಿಸಿದ್ದರು.
10ನೇ ತರಗತಿ ಮೋಟಿವೇಶನ್ ಕ್ಲಾಸನ್ನು ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್ ಅವರು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಪಾಸ್ ಮಾಡುವ ವಿಧಾನ ತಿಳಿಸಿದರು.
ಉತ್ತಮ ವಿದ್ಯಾರ್ಥಿ ಆಯ್ಕೆ: 2025 26ನೇ ಸಾಲಿನ 8,9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಸ್ತು, ವಿನಯತೆ, ಪಠ್ಯ, ಸಹಪಠ್ಯ, ಕ್ರೀಡೆ, ಮಾನದಂಡದ ಆಧಾರದ ಮೇಲೆ ಈ ವರ್ಷದ ಉತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. 8ನೇ ತರಗತಿಯಲ್ಲಿ ಶರಣಬಸವ ತಂದೆ ಈರಪ್ಪ 9ನೇ ತರಗತಿಯಲ್ಲಿ ಕಾವೇರಿ ತಂದೆ ಶಿವನಗೌಡ 10ನೇ ತರಗತಿಯಲ್ಲಿ ಸಿಂಧು ತಂದೆ ಕರೇಗೌಡ ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದರು.
ಬಹುಮಾನ ವಿತರಣೆ: 2024-25 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಹೆಚ್ಚು ಅಂಕ ಪಡೆದ ಯಂಕಮ್ಮ ತಂದೆ ಹನುಮನಗೌಡ ವಿದ್ಯಾರ್ಥಿನಿಗೆ ಶಾಲೆಯ ಕಡೆಯಿಂದ ಬಹುಮಾನ ನೀಡಿ ಸನ್ಮಾನ ಮಾಡಲಾಯಿತು. ವಿಷಯವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯಾ ವಿಷಯ ಶಿಕ್ಷಕರು ಬಹುಮಾನ ನೀಡಿದರು. ಕನ್ನಡ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಯಂಕಮ್ಮ ಹನುಮನಗೌಡ ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ನಾಗರತ್ನ ಅಮರೇಶ ಹಿಂದಿ, ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿಕ್ರಮ್ ಶ್ರೇಷ್ಠಿ. ಬಹುಮಾನಗಳನ್ನು ಪಡೆದುಕೊಂಡರು.
ಸನ್ಮಾನ: 2025 26 ನೇ ಸಾಲಿನಲ್ಲಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶ್ರೀ ಹನುಮೇಶ್ ಹಾಗೂ ಕುಮಾರಿ ಶಿಲ್ಪ ಇವರಿಗೆ ಶಾಲೆಯ ವತಿಯಿಂದ ಸನ್ಮಾನ, ನೆನಪಿನ ಕಾಣಿಕೆಯನ್ನು ನೀಡಿದರು. ಉತ್ತಮ ಶಿಕ್ಷಣ ಸಾರಥಿ ಪ್ರಶಸ್ತಿ ಪಡೆದ ಶ್ರೀಮತಿ ಶರಣಮ್ಮ ಕನ್ನಡ ಪಂಡಿತರು ಇವರಿಗೆ ಶಾಲಾ ವತಿಯಿಂದ ಸನ್ಮಾನಿಸಿದರು.
ಸ್ವಾಗತವನ್ನು 9ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣ ಮಾಡಿದರು. ಕೊನೆಯಲ್ಲಿ ಮಹೇಶ್ ಹಿಂದಿ ಶಿಕ್ಷಕರು ವಂದನಾರ್ಪಣೆಯನ್ನು ನೆರವೇರಿಸಿದರು. ತದನಂತರದ ಎಲ್ಲಾ ವಿದ್ಯಾರ್ಥಿಗಳು ಹೋಳಿಗೆ ಊಟದ ರುಚಿ ಸವಿದರು. ಊಟದ ತರುವಾಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಶಾಲೆಯ ವಿದ್ಯಾರ್ಥಿಗಳೆಲ್ಲ ಹಾಡು, ನೃತ್ಯ ಮತ್ತು ಕಿರು ನಾಟಕಗಳ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ರಂಜಿಸಿದರು.

ಇದೇ ವೇಳೆಯಲ್ಲಿ ಮುಖ್ಯ ಗುರುಗಳಾದ ವಿರುಪಣ್ಣರವರು, ವೆಂಕನಗೌಡ ವಟಗಲ್ ಹಿರಿಯ ಶಿಕ್ಷಕ ಸೋಮಲಿಂಗಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಯೋಜನಾ ನಿರ್ವಾಹಕ ಮಂಜುನಾಥ ಹೆಡಗಿನಾಳ, ಶಿಕ್ಷಕ ಕೇಶವಮೂರ್ತಿ ಬಿ.ವಿ, ಶಿಕ್ಷಕಿ ಶ್ರೀಮತಿ ಶರಣಮ್ಮ, ಶಿಕ್ಷಕ ಮಹೇಶ್ ಶಿಕ್ಷಕಿ ಶಿಲ್ಪ, ಶಿಕ್ಷಕ ಹನುಮೇಶ, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.



