Home Latest ಬೆಂಗಳೂರು ಮಡಗಾಂವ್ ವಂದೇಭಾರತ್ ರೈಲು ಮಂಗಳೂರಿನಲ್ಲಿ ನಿಲುಗಡೆ ಕುರಿತು ಸಂಸದ ಕೋಟ…!!

ಬೆಂಗಳೂರು ಮಡಗಾಂವ್ ವಂದೇಭಾರತ್ ರೈಲು ಮಂಗಳೂರಿನಲ್ಲಿ ನಿಲುಗಡೆ ಕುರಿತು ಸಂಸದ ಕೋಟ…!!

ಮಂಗಳೂರು : ಬೆಂಗಳೂರು ಮಡಗಾಂವ್ ವಂದೇಭಾರತ್ ರೈಲಿಗೆ ಮಂಗಳೂರಿನಲ್ಲಿ ನಿಲುಗಡೆ ಇಲ್ಲ ಎಂಬ ಸುದ್ದಿಗೆ ಇದೀಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಂಸದ ಕೋಟ ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಯಾಣದ ಬಗ್ಗೆ ಗೊಂದಲದ ಸುದ್ದಿಗಳು ಹೊರಬರುತ್ತಿವೆ. ಬರಲಿರುವ ವಂದೇ ಭಾರತ್ ರೈಲು ಮಂಗಳೂರು, ಉಡುಪಿ, ಕಾರವಾರದಲ್ಲಿ ನಿಲುಗಡೆ ಇಲ್ಲ ಎಂಬ ವದಂತಿ ಹರಿದಾಡುತ್ತಿದ್ದು ಪ್ರಯಾಣಿಕರಿಗೆ ಯಾವುದೇ ಗೊಂದಲ ಬೇಡ. ಕರಾವಳಿಯ ಪ್ರದೇಶವಾದ ಮಂಗಳೂರು, ಉಡುಪಿ, ಕಾರವಾರವು ಸೇರಿದಂತೆ ಅಗತ್ಯ ಇದ್ದೆಡೆ ವಂದೇ ಭಾರತ್ ರೈಲು ನಿಲುಗಡೆಗೆ ಪ್ರಸ್ತಾವನೆ ನೀಡಲಾಗಿದೆ ಎಂದಿದ್ದಾರೆ.

ಅಲ್ಲದೆ ರೈಲ್ವೆ ಇತಿಹಾಸದಲ್ಲಿಯೇ ರಾಜಧಾನಿಗೆ ಕರಾವಳಿ ಪ್ರದೇಶವನ್ನು ಬೆಸೆಯುತ್ತಿರುವ ಮೋದಿ ಸರಕಾರ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ ಸೋಮಣ್ಣರವರು ಅಭಿನಂದನೆ. ವಂದೇ ಭಾರತ್ ಕರಾವಳಿಗರಿಗಾಗಿಯೇ ಹೊರಡಲು ಸಿದ್ಧವಾದ ರೈಲು. ವಂದೇ ಭಾರತ್ ಪ್ರಯಾಣಿಕರ ಜೊತೆ ಕರಾವಳಿ ಜನಪ್ರತಿನಿಧಿಗಳು ನಿಮ್ಮೊಂದಿಗಿರುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.

ಸದ್ಯ ರೈಲ್ವೆ ಇಲಾಖೆ ವೇಳಾಪಟ್ಟಿ ಸಿದ್ದತೆಯಲ್ಲಿದ್ದು, ಮುಂದೆ ವಂದೇಭಾರತ್ ರೈಲು ಮಂಗಳೂರಿನಲ್ಲಿ ನಿಲುಗಡೆ ಸಿಗುತ್ತಾ ಅನ್ನೊದು ಕಾದು ನೋಡಬೇಕಾಗಿದೆ.