Home Crime ಪಡುಬಿದ್ರಿ: ಮನೆಯಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ…!!

ಪಡುಬಿದ್ರಿ: ಮನೆಯಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ…!!

ಪಡುಬಿದ್ರಿ: ಉಡುಪಿ ಜಿಲ್ಲೆ ಪಡುಬಿದ್ರಿ ಸಮೀಪದ ಎಲ್ಲೂರು ಗ್ರಾಮದಲ್ಲಿ ಮನೆಯೊಂದರಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಸಾವನ್ನಪ್ಪಿದವರು ಎಲ್ಲೂರು ಗ್ರಾಮದ ನಿವಾಸಿ ಪ್ರಶಾಂತ್ ಶೆಟ್ಟಿ (46) ಎಂದು ತಿಳಿಯಲಾಗಿದೆ.

ಇವರು ವಿಪರೀತ ಮದ್ಯಪಾನ ಚಟ ಹೊಂದಿದ್ದರು. ಮದುವೆಯಾಗಿರದ ಪ್ರಶಾಂತ್ ಅವರು ಪ್ರತಿದಿನ ಕುಡಿದು ಬಂದು ಒಬ್ಬಂಟಿಯಾಗಿ ರೂಮಿನಲ್ಲಿ ಇರುತ್ತಿದ್ದರು. ಯಾರೊಂದಿಗೂ ಮಾತನಾಡದೆ, ಸರಿಯಾದ ಸಮಯಕ್ಕೆ ಊಟ ಮಾಡದೆ ಬಾಗಿಲು ಹಾಕಿಕೊಂಡು ಇರುವ ಅಭ್ಯಾಸ ಹೊಂದಿದ್ದರು.

ದಿನಾಂಕ 28.09.2026 ರಂದು ಮಧ್ಯಾಹ್ನ 12:00 ಗಂಟೆಗೆ ಕುಡಿದು ಬಂದು ಪಾರ್ಸೆಲ್ ಊಟ ತಂದು ರೂಂಗೆ ಬಾಗಿಲು ಹಾಕಿಕೊಂಡು ಮಲಗಿದ್ದರು.

ದಿನಾಂಕ 29.08.2026 ರಂದು ಬೆಳಿಗ್ಗೆ ಸುಮಾರು 08:30ಕ್ಕೆ ಮನೆಯವರು ಹಲವು ಬಾರಿ ಬಾಗಿಲು ತಟ್ಟಿ ಕರೆದರೂ ಪ್ರತಿಕ್ರಿಯೆ ಬಾರದ ಕಾರಣ ಅನುಮಾನಗೊಂಡರು. ನಂತರ ಕೋಣೆಯ ಹಿಂಬದಿಯ ಕಿಟಕಿ ಬಳಿ ಹೋಗಿ ನೋಡಿದಾಗ, ಕಿಟಕಿಯ ಕಬ್ಬಿಣದ ಕಂಬಿಗೆ ಮೆರೂನ್ ಬಣ್ಣದ ಕಾಟನ್ ಶಾಲು ಟ್ಟಿರುವುದು ಕಂಡುಬಂತು.

ಕಿಟಕಿಯಿಂದ ಒಳಗೆ ನೋಡಿದಾಗ ಪ್ರಶಾಂತ್ ಶೆಟ್ಟಿ ಅವರು ಶಾಲನ್ನು ಕುತ್ತಿಗೆಗೆ ಬಿಗಿದುಕೊಂಡು ನೆಲಕ್ಕೆ ಕುಸಿದು ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ. ಶವದಿಂದ ವಾಸನೆ ಬರುತ್ತಿತ್ತು.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ UDR ನಂಬರ್: 14/2026, ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.